ಮುಂಬೈ ಇಂಡಿಯನ್ಸ್ ವಿರುದ್ಧ ಯುಪಿ ವಾರಿಯರ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಗೆಲುವು

Update: 2024-02-28 17:39 GMT

photo : x/@wplt20

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಮನ್ಸ್ ಪ್ರೀಮಿಯರ್ ಲೀಗ್ ನ ಮುಂಬೈ ಇಂಡಿಯನ್ಸ್ ‌ ವಿರುದ್ದದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಮುಂಬೈ ಇಂಡಿಯನ್ಸ್ ನೀಡಿದ್ದ  162 ರನ್‌ ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ತಂಡವು ಕೇವಲ 16.3 ಓವರ್‌ ಗಳಲ್ಲಿ ತನ್ನ ನಿಗಧಿತ ಗುರಿ ತಲುಪಿತು.

ಯುಪಿ ವಾರಿಯರ್ಸ್ ಪರ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ ನಾಯಕಿ ಅಲಿಸ್ಸಾ ಹೀಲಿ, 5 ಬೌಂಡರಿ ಸಹಿತ 33 ರನ್ ಗಳಿಸಿದರೆ, ಅವರಿಗೆ ಸಾಥ್‌ ನೀಡಿದ್ದ  ಕಿರಣ್‌ ನೌಗಿರೆ ಆಕರ್ಷಕ ಅರ್ಧಶತಕ ದಾಖಲಿಸಿದರು. 31 ಎಸೆತ ಎದುರಿಸಿದ ನೌಗಿರೆ 6 ಬೌಂಡರಿ 4 ಭರ್ಜರಿ ಸಿಕ್ಸರ್‌ ಸಹಿತ 57 ರನ್‌ ಪೇರಿಸಿ ಅಮೇಲಿಯಾ ಬೌಲಿಂಗ್‌ ನಲ್ಲಿ ಪೆವಿಲಿಯನ್‌ ಕಡೆ ಹೆಜ್ಜೆ ಹಾಕಿದರು. ಬಳಿಕ ತಂಡವನ್ನು ಗೆಲುವಿನತ್ತ ಕೊಂಡೊಯ್ದ ಗ್ರೇಸ್‌ ಹಾರಿಸ್‌ 38 ರನ್‌ ಬಾರಿಸಿದರೆ, ದೀಪ್ತಿ ಶರ್ಮಾ 27 ರನ್‌ ಕೊಡುಗೆ ನೀಡಿದರು.

ಮುಂಬೈ ಇಂಡಿಯನ್ಸ್‌ ಪರ  ಇಸ್ಸೆ ವೋಂಗ್ 2 ವಿಕೆಟ್ , ಅಮೇಲಿಯಾ ಕೆರ್ 1 ವಿಕೆಟ್ ಪಡೆದುಕೊಂಡರು .

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News