ಭಾರತದ ಟಿ-20 ಕ್ರಿಕೆಟ್ ವಿಶ್ವಕಪ್ ತಂಡದಿಂದ ವಿರಾಟ್ ಕೊಹ್ಲಿ ಹೊರಕ್ಕೆ: ವರದಿ

Update: 2024-03-12 14:29 GMT

ವಿರಾಟ್ ಕೊಹ್ಲಿ | Photo: PTI 

ಹೊಸದಿಲ್ಲಿ: ಪುರುಷರ ಟಿ-20 ವಿಶ್ವಕಪ್ ಗಾಗಿ ತಾತ್ಕಾಲಿಕ ತಂಡಗಳನ್ನು ಮೇ ಮೊದಲ ವಾರದಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಗೆ(ಐಸಿಸಿ)ಕಳುಹಿಸಲಾಗುವುದು. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಬಿಸಿಸಿಐ ಆಯ್ಕೆಗಾರರು ಮುಂಬರುವ ಪ್ರತಿಷ್ಠಿತ ಟೂರ್ನಮೆಂಟ್ ನಿಂದ ಟೀಮ್ ಇಂಡಿಯಾದಿಂದ ಹೊರಗಿಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ವೆಸ್ಟ್ಇಂಡೀಸ್ ಹಾಗೂ ಅಮೆರಿಕದ ಜಂಟಿ ಆತಿಥ್ಯದಲ್ಲಿ ಈ ಬಾರಿಯ ಟಿ-20 ವಿಶ್ವಕಪ್ ಟೂರ್ನಿಯು ಜೂನ್ 2ರಿಂದ 29ರ ತನಕ ನಡೆಯಲಿದೆ.

2024ರ ಟಿ-20 ವಿಶ್ವಕಪ್ ಗೆ ರೋಹಿತ್ ಶರ್ಮಾ ಅವರು ಭಾರತ ಕ್ರಿಕೆಟ್ ತಂಡದ ನಾಯಕತ್ವವಹಿಸಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈಗಾಗಲೇ ದೃಢಪಡಿಸಿದ್ದಾರೆ.ಆದರೆ ಕೊಹ್ಲಿ ಅವರನ್ನು ಟೂರ್ನಮೆಂಟ್ ನಲ್ಲಿ ಸೇರ್ಪಡೆಗೊಳಿಸುವ ಕುರಿತು ಸ್ಪಷ್ಟತೆ ಇಲ್ಲ ಎಂದು ಟೆಲಿಗ್ರಾಫ್ ನಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿದುಬಂದಿದೆ.

ಭಾರತವು 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸಿದ ನಂತರ ಐಸಿಸಿ ಟ್ರೋಫಿಯನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿಯು ಮಾಜಿ ನಾಯಕ ಕೊಹ್ಲಿ ಅವರನ್ನು ತಂಡದಿಂದ ಕೈಬಿಡುವುದು ಸೇರಿದಂತೆ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆಗೆ ಸಿಲುಕಿದೆ.

ಕೊಹ್ಲಿ ಅವರು ಟಿ-20 ಮಾದರಿಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ, ಈ ವರ್ಷದ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಆಯ್ಕೆ ಸಮಿತಿಯು ಕೊಹ್ಲಿ ಅವರನ್ನು ವಿಶ್ವಕಪ್ ತಂಡದಲ್ಲಿ ಸೇರಿಸಿಕೊಳ್ಳುವ ಕುರಿತು ಮರು ಚಿಂತನೆ ನಡೆಸಬಹುದು ಎಂದು ವರದಿ ತಿಳಿಸಿದೆ.

ಬ್ಯಾಟಿಂಗ್ ಐಕಾನ್ ಕೊಹ್ಲಿ ವೈಯಕ್ತಿಕ ಕಾರಣಕ್ಕೆ ಇಂಗ್ಲೆಂಡ್ ವಿರುದ್ದದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News