ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಸ್ಪಿನ್‌ ದಾಳಿಗೆ ತತ್ತರಿಸಿದ ನ್ಯೂಝಿಲ್ಯಾಂಡ್

Update: 2024-11-01 09:59 GMT

Photo credit: BCCI

ಮುಂಬೈ : ಇಲ್ಲಿನ ವಾಂಖೆಡೆ ಸ್ಟೇಡಿಯಮ್ ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಸ್ಪಿನ್ ಬೌಲಿಂಗ್ ಗೆ ತತ್ತರಿಸಿದ ನ್ಯೂಝಿಲ್ಯಾಂಡ್ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 65.4 ಓವರ್ ಗಳಲ್ಲಿ 235 ರನ್ ಗೆ ಆಲೌಟ್ ಆಗಿದೆ.

ರವೀಂದ್ರ ಜಡೇಜಾ ವಿಕೆಟ್‌ ಪಡೆದರೆ ವಾಷಿಂಗ್ಟನ್ ಸುಂದರ್ 4 ವಿಕೆಟ್‌ ಪಡೆದು ಮಿಂಚಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ನ್ಯೂಝಿಲ್ಯಾಂಡ್ ತಂಡವು ಮುಂಬೈ ಮೂರನೇ ಓವರ್ ನಲ್ಲಿ ಡಿ ಕಾನ್ವೆ ಅವರ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. 4 ರನ್ ಗಳಿಸಿ ಕ್ರೀಸ್ ನಲ್ಲಿದ್ದ ಡಿಕಾನ್ವೆ ಅವರು ಆಕಾಶ್ ದೀಪ್ ಅವರ ಎಸೆತದಲ್ಲಿ ಎಲ್ ಬಿ ಡಬ್ಯೂ ಬಲೆಗೆ ಬಿದ್ದರು.

ಆರಂಭಿಕ ಆಟಗಾರ, ನಾಯಕ ಲ್ಯಾಥಮ್ ರಕ್ಷಣಾತ್ಮಕ ಆಟ ಪ್ರದರ್ಶಿಸಿದರು. ಅವರಿಗೆ ವಿಲ್ ಯಂಗ್ ಅವರು ಸಾಥ್ ನೀಡಿದರು. 178 ಎಸೆತ ಎದುರಿಸಿದ ವಿಲ್ ಯಂಗ್ 71 ರನ್ ಗಳಿಸಿ ನ್ಯೂಝಿಲ್ಯಾಂಡ್ ತಂಡಕ್ಕೆ ರನ್ ಪೇರಿಸಲು ನೆರವಾದರು. ರವೀಂದ್ರ ಜಡೇಜಾ ಎಸೆತದಲ್ಲಿ ರೋಹಿತ್ ಶರ್ಮ ಗೆ ಕ್ಯಾಚ್ ನೀಡಿ ಅವರು ನಿರ್ಮಿಸಿದರು.

ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ರಚಿನ್ ರವೀಂದ್ರ ಬ್ಯಾಟ್ ವಾಂಖೆಡೆ ಯಲ್ಲಿ ಸದ್ದು ಮಾಡಲಿಲ್ಲ. ಕೇವಲ 5 ರನ್ ಗಳಿಸಿದ್ದ ರಚಿನ್, ವಾಷಿಂಗ್ಟನ್ ಸುಂದರ್ ಸ್ಪಿನ್ ಬೌಲಿಂಗ್ ನಲ್ಲಿ ಪೆವಿಲಿಯನ್ ಹಾದಿ ಹಿಡಿದರು.

ನಾಯಕ ಲ್ಯಾಥಮ್ 28 ರನ್ ಗಳಿಸಿ ಔಟಾದಾಗ ನ್ಯೂಝಿಲ್ಯಾಂಡ್ ಗೆ ನೆರವಾದವರು ಡೆರಿಲ್ ಮಿಚೆಲ್. ಕ್ರೀಸ್ ಗೆ ಅಂಟಿಕೊಂಡು ನಿಂತು ಆಟವಾಡಿದ ಅವರು 129 ಎಸೆತಗಳಲ್ಲಿ 82 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ರೋಹಿತ್ ಶರ್ಮಗೆ ವಿಕೆಟ್ ಒಪ್ಪಿಸಿದರು.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News