ಚಿಕ್ಕಮಗಳೂರು: ಆಕಸ್ಮಿಕ ಬೆಂಕಿ; 3 ಗುಡಿಸಲುಗಳು ಬೆಂಕಿಗಾಹುತಿ
ಚಿಕ್ಕಮಗಳೂರು: 3 ಗುಡಿಸಲುಗಳು ಆಕಸ್ಮಿಕಬೆಂಕಿಗಾಹುತಿಯಾದ ಘಟನೆ ಕಡೂರು ತಾಲೂಕಿನ ಗುಮ್ಮನಹಳ್ಳಿ ಸಮೀಪದ ಭೋವಿ ಕಾಲೋನಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಘಟನೆ ನಡೆದ ವೇಳೆ ಊರಿನ ಗಂಡಸರು ಗ್ರಾಮದಲ್ಲಿ ಸಾವನ್ನಪ್ಪಿದ್ದವರ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದು, ಮನೆಯಲ್ಲಿದ್ದ 6 ವರ್ಷದ ಮಗು ಮತ್ತು ಬಾಲಕನೊಬ್ಬನನ್ನು ಮಹಿಳೆಯರೇ ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
ಶಶಿ, ಕಲ್ಲೇಶ್ ಮನೆ ಸಂಪೂರ್ಣ ಸುಟ್ಟು ಹೋಗಿದ್ದು, ಹನುಮಂತ ಎಂಬವರ ಮನೆ ಭಾಗಶಃ ಹಾನಿಯಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಹಳ್ಳಿಗರು ಅಂತ್ಯ ಸಂಸ್ಕಾರವನ್ನು ಅರ್ಧಕ್ಕೆ ಬಿಟ್ಟು ಬಂದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿ ನಂದಿಸಿದ್ದಾರೆ.
ಹಳ್ಳಿಯಲ್ಲಿರುವ ಹಲವರು ಕೂಲಿ ಮಾಡಿಕೊಂಡು ಗುಡಿಸಲಲ್ಲಿ ವಾಸವಿದ್ದು, ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕಡೂರು ತಾಲೂಕಿನ ಗುಮ್ಮನಹಳ್ಳಿ ಸಮೀಪದ ಭೋವಿ ಕಾಲೋನಿಯಲ್ಲಿ 3 ಗುಡಿಸಲುಗಳು ಆಕಸ್ಮಿಕಬೆಂಕಿಗಾಹುತಿಯಾದ ಘಟನೆ ನಡೆದಿದೆ.
— ವಾರ್ತಾ ಭಾರತಿ | Vartha Bharati (@varthabharati) November 2, 2023
ಸ್ಥಳಕ್ಕೆ ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿ ನಂದಿಸಿದ್ದಾರೆ. pic.twitter.com/ffx0yYYeqe