ಪಿಎಂ ಮಿತ್ರಾ ಪಾರ್ಕಿಗೆ 1 ಸಾವಿರ ಎಕರೆ ಭೂಮಿ: ಸಚಿವ ಶಿವಾನಂದ ಪಾಟೀಲ್

Update: 2023-12-12 18:12 GMT

ಬೆಳಗಾವಿ: ಕೇಂದ್ರ ಸರಕಾರದ ಸಹಯೋಗದೊಂದಿಗೆ ಕಲಬುರಗಿಯಲ್ಲಿ ನಿರ್ಮಾಣ ಆಗಲಿರುವ ‘ಪಿಎಂ ಮಿತ್ರಾ ಜವಳಿ ಮತ್ತು ಸಿದ್ಧ ಉಡುಪಿನ ಪಾರ್ಕ್’ಗೆ ಒಂದು ಸಾವಿರ ಎಕರೆ ಭೂಮಿ, ರಿಯಾಯಿತಿ ದರದಲ್ಲಿ ವಿದ್ಯುತ್, ನೀರು ನೀಡಲಾಗುವುದು ಎಂದು ಜವಳಿ ಸಚಿವ ಶಿವಾನಂದ ಎಸ್.ಪಾಟೀಲ್ ಹೇಳಿದ್ದಾರೆ.

ಮಂಗಳವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕೇಂದ್ರ ಸರಕಾರವು ಅಂತಾರಾಷ್ಟ್ರೀಯ ಮಟ್ಟದ ಜವಳಿ ಮತ್ತು ಸಿದ್ದ ಉಡುಪಿನ ಪಾರ್ಕ್ ನಿರ್ಮಾಣಕ್ಕೆ ಪಿಎಂ-ಮಿತ್ರಾ ಪಾರ್ಕ್ ಯೋಜನೆಯಡಿ ಕಲಬುರಗಿ ಜಿಲ್ಲೆಯ ಕಿರಣಗಿ, ನದಿಸಿನ್ನೂರು ಹಾಗೂ ಫಿರೋಜಾಬಾದ್ ಗ್ರಾಮಗಳ ವಿವಿಧ ಸರ್ವೆ ನಂಬರ್ ಗಳಡಿ 1000 ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಅನುಮೋದನೆ ನೀಡಿದೆ ಎಂದರು.

1 ಸಾವಿರ ಎಕರೆ ಜಮೀನನ್ನು 99 ವರ್ಷಗಳ ಅವಧಿಗೆ ಪ್ರತಿ ಎಕರೆಗೆ 1 ರೂ.,ರಂತೆ ಕ್ಯಾಬಿನೆಟ್ ಅನುಮೋದನೆ ಯೊಂದಿಗೆ ಹಸ್ತಾಂತರಿಸಲಿದೆ. ಅದೇ ರೀತಿ, ರಾಜ್ಯ ಸರಕಾರವು ಈ ಪಾರ್ಕ್‍ನಲ್ಲಿ ಸ್ಥಾಪನೆ ಯಾಗಲಿರುವ ಜವಳಿ ಘಟಕಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಹಾಗೂ ನೀರನ್ನು ಸರಬರಾಜು ಮಾಡಲಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News