ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ LKG ತರಗತಿ ಆರಂಭಿಸಲು ರಾಜ್ಯ ಸರಕಾರ ಅನುಮೋದನೆ
Update: 2024-11-22 16:34 GMT
ಬೆಂಗಳೂರು: ರಾಜ್ಯ ಸರಕಾರವು 2024-25ನೆ ಸಾಲಿನಿಂದ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ(ಕೆಪಿಎಸ್) ಆಂಗ್ಲ ಮಾಧ್ಯಮದ ಎಲ್.ಕೆ.ಜಿ. ತರಗತಿಗಳನ್ನು ಹಾಗೂ ಒಂದನೆ ತರಗತಿಯ ಹೆಚ್ಚುವರಿ ವಿಭಾಗವನ್ನು ಪ್ರಾರಂಭಿಸಲು ಅನುಮೋದನೆ ನೀಡಿದೆ.
ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಒಟ್ಟು 286 ಕರ್ನಾಟಕ ಪಬ್ಲಿಕ್ ಶಾಲೆಗಳ ಪೈಕಿ 42 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಹೆಚ್ಚುವರಿಯಾಗಿ ಎಲ್.ಕೆ.ಜಿ ತರಗತಿಗಳನ್ನು ಆರಂಭಿಸಬಹುದಾಗಿದೆ. 51 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಒಂದನೆ ತರಗತಿಯ ಹೆಚ್ಚುವರಿ ವಿಭಾಗವನ್ನು ಆರಂಭಿಸಬಹುದಾಗಿದೆ.
ಈ ತರಗತಿಗಳಿಗೆ ಪ್ರಾಥಮಿಕ ಶಾಲಾ ಶಿಕ್ಷಕರನ್ನೇ ಮರುನಿಯೋಜನೆ ಮಾಡಬೇಕಾಗಿದ್ದು, ಇದರಿಂದ ಉಂಟಾಗುವ ಹೆಚ್ಚುವರಿ ವೆಚ್ಚಗಳನ್ನು 2024-25ನೆ ಸಾಲಿನ ಆಯವ್ಯಯದಲ್ಲಿ ಕೆಪಿಎಸ್ ಶಾಲೆಗಳಿಗೆ ನಿಗಧಿಪಡಿಸಲಾದ ಅನುದಾನದಲ್ಲಿ ಭರಿಸಬೇಕು ಎಂದು ಸರಕಾರವು ಆದೇಶದಲ್ಲಿ ತಿಳಿಸಿದೆ.