ಕಲಬೆರಕೆ ತುಪ್ಪ ಪತ್ತೆ ಹಚ್ಚಲು ಕೆಎಂಎಫ್ ತಂಡವನ್ನು ರಚಿಸಬೇಕು : ಬಾಲಚಂದ್ರ ಜಾರಕಿಹೊಳಿ

Update: 2024-09-23 14:54 GMT

ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ : ರಾಜ್ಯದಲ್ಲಿ ಮಾರಾಟವಾಗುವ ತುಪ್ಪದ ಗುಣಮಟ್ಟ ಪರೀಕ್ಷೆಗಾಗಿ ಹಾಗೂ ಕಲಬೆರಕೆ ತುಪ್ಪವನ್ನು ಪತ್ತೆ ಹಚ್ಚಲು ಕೆಎಂಎಫ್ ಪ್ರತ್ಯೇಕ ತಂಡವನ್ನು ರಚಿಸಬೇಕು ಎಂದು ಕೆಎಂಎಫ್ ಮಾಜಿ ಅಧ್ಯಕ್ಷ ಹಾಗೂ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ(ಬೆಮುಲ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಆಗ್ರಹಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ತುಪ್ಪದ ಗುಣಮಟ್ಟ ಪರೀಕ್ಷೆಯನ್ನು ನಗರ ಸ್ಥಳೀಯ ಸಂಸ್ಥೆಗಳು ಮಾಡಬೇಕು. ಆದರೆ, ಅವು ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆಎಂಎಫ್ ಆ ಕಾರ್ಯಕ್ಕೆ ಮುಂದಾಗಬೇಕು ಎಂದು ಕೋರಿದರು.

‘ಈ ಹಿಂದೆ ನಾನು ಕೆಎಂಎಫ್ ಅಧ್ಯಕ್ಷನಾಗಿದ್ದ ವೇಳೆ ತಿರುಪತಿ ದೇವಸ್ಥಾನಕ್ಕೆ ‘ಲಡ್ಡು' ತಯಾರಿಕೆಗೆ ತುಪ್ಪ ಕಳುಹಿಸುತ್ತಿದ್ದೆವು. ನಾವೇ ತಯಾರಿಸಿದ ತುಪ್ಪವನ್ನು ಪ್ರಸಾದಕ್ಕೆ ಬಳಸಲಾಗುತ್ತಿದೆ ಎಂಬ ಹೆಮ್ಮೆ ಇತ್ತು. ನಾಲ್ಕು ವರ್ಷಗಳ ಹಿಂದೆ ದೇವಸ್ಥಾನದವರು ಟೆಂಡರ್ ವ್ಯವಸ್ಥೆ ಮಾಡಿ ಆಗ ಕಡಿಮೆ ಮೊತ್ತಕ್ಕೆ ತುಪ್ಪ ಪೂರೈಕೆ ಗುತ್ತಿಗೆಯನ್ನು ಖಾಸಗಿ ಏಜೆನ್ಸಿ ಪಡೆಯಿತು ಎಂದು ಹೇಳಿದರು.

ಇದೀಗ ಲಡ್ಡು ವಿವಾದದ ಹಿನ್ನೆಲೆಯಲ್ಲಿ ನಂದಿನಿ ತುಪ್ಪಕ್ಕೆ ದೇಶದಾದ್ಯಂತ ಬೇಡಿಕೆ ಹೆಚ್ಚಿದ್ದು, ನಾಲ್ಕು ವರ್ಷಗಳ ನಂತರ ತಿರುಪತಿ ದೇವಸ್ಥಾನಕ್ಕೆ ಮತ್ತೆ ಪೂರೈಕೆ ಆರಂಭವಾಗಿದೆ. ಎಲ್ಲ ದೇವಾಲಯಗಳಲ್ಲಿ ನಂದಿನ ತುಪ್ಪ ಬಳಸುವಂತೆ ಮನವಿ ಮಾಡುತ್ತೇನೆ' ಎಂದು ಬಾಲಚಂದ್ರ ಜಾರಕಿಹೊಳಿ ಇದೇ ವೇಳೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News