ಬೆಂಗಳೂರು| ಪಿತ್ತಜನಕಾಂಗದಿಂದ 345 ಕಲ್ಲುಗಳನ್ನು ಹೊರತೆಗೆದ ವೈದ್ಯರು

Update: 2023-11-24 14:15 GMT

ಬೆಂಗಳೂರು: ಸುಮಾರು 51 ವರ್ಷದ ಮಹಿಳೆಯೊಬ್ಬರ ಪಿತ್ತಕೋಶದಲ್ಲಿದ್ದ 345 ಕಲ್ಲುಗಳನ್ನು ಹೊರ ತೆಗೆಯುವಲ್ಲಿ ನಗರದ ಆಸ್ಟರ್ ಆರ್‍ವಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

‘ಒಂದು ತಿಂಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ಬಂದಿದ್ದರು. ಪರೀಕ್ಷೆ ನಡೆಸಿದಾಗ ಪಿತ್ತಕೋಶ ಬಾತುಕೊಂಡಿತ್ತು. ಪಿತ್ತಕೋಶವನ್ನು ಕೇವಲ 1 ಸೆಂ.ಮೀ ಸೀಳುವಿಕೆಯ ಮೂಲಕ ಹೊರತೆಗೆಯಬಹುದಾದ ಲ್ಯಾಪರೋಸ್ಕೋಪಿಕ್ ಕೋಲಿಸಿ ಸ್ಟೆಕ್ಟಮಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು’ ಎಂದು ಆಸ್ಪತ್ರೆಯ ತಜ್ಞ ವೈದ್ಯ ಡಾ.ಗಿರೀಶ್ ತಿಳಿಸಿದರು.

‘ಪಿತ್ತಕೋಶದ ಗಾತ್ರ ಮತ್ತು ಕಲ್ಲುಗಳ ಸಂಖ್ಯೆಯಿಂದಾಗಿ ಈ ಶಸ್ತ್ರಚಿಕಿತ್ಸೆಯು ಸವಾಲಾಗಿತ್ತು.  ಶಸ್ತ್ರಚಿಕಿತ್ಸೆ  ಮೂಲಕ ನಮ್ಮ ಪರಿಣತಿ ತಂಡ ಪಿತ್ತಜನಕಾಂಗದಿಂದ 345 ಕಲ್ಲು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ವೈದ್ಯಕೀಯ ವಿಜ್ಞಾನದ ಸಾಮಥ್ರ್ಯ ಪ್ರದರ್ಶಿಸಿತು. ರೋಗಿಯು ಇದೀಗ ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ವೈದ್ಯ ಡಾ.ಶಿವಪ್ರಸಾದ್ ಗಿಳಿಯಾರ್ ಶ್ರೀನಿವಾಸ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News