ಬೆಂಗಳೂರು: ಮೇಘನಾ ಫುಡ್ಸ್​ ಗ್ರೂಪ್ ಕಂಪನಿ ಮೇಲೆ ಐಟಿ ದಾಳಿ

Update: 2024-03-19 05:37 GMT

 ಬೆಂಗಳೂರು: ಹೈದರಾಬಾದ್​​ ಮತ್ತು ಬೆಂಗಳೂರಿನಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ಮೇಘನಾ ಫುಡ್ಸ್​ ಕಂಪನಿಗೆ ಸಂಬಂಧಿಸಿದ​ 10ಕ್ಕೂ ಹೆಚ್ಚು ಕಡೆ ಇದೀಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

 ಆದಾಯ ತೆರಿಗೆ ಪಾವತಿಯಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಸದ್ಯ ಐಟಿ ಅಧಿಕಾರಿಗಳು ದಾಳಿ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಹೈದರಾಬಾದ್​​  ಮತ್ತು ಬೆಂಗಳೂರು ನಗರಗಳಲ್ಲಿ ಹೆಚ್ಚು ಹೆಸರುವಾಸಿಯಾದ ಮೇಘನಾ ಫುಡ್ಸ್, ತನ್ನ ಹೋಟೆಲ್ ಮತ್ತು ರೆಸ್ಟೋರೆಂಟ್​ಗಳನ್ನು ಬೆಂಗಳೂರಿನ ಕೋರಮಂಗಲ, ಇಂದಿರಾನಗರ, ಜಯನಗರದಲ್ಲಿರುವ ಶಾಖೆಗಳನ್ನು ನಡೆಸುತ್ತಿವೆ.

ಐ ಟಿ ಅಧಿಕಾರಿಗಳು ಕರ್ನಾಟಕ ಮತ್ತು ಗೋವಾ ವಿಭಾಗದಿಂದ ಆಗಮಿಸಿದ್ದಾರೆ ಎನ್ನಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News