ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಶ್ವಾನ ಸಾವು

Update: 2023-09-01 06:16 GMT

ಕಾವ್ಯ 

ಬೆಂಗಳೂರು: 9 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಕಾವ್ಯ ಎಂಬ ಹೆಸರಿನ ಶ್ವಾನ, ವಯೋಸಹಜ ಖಾಯಿಲೆಯಿಂದ ಸಾವನ್ನಪ್ಪಿದೆ.

2014 ರಲ್ಲಿ ಜನಿಸಿದ್ದ ಕಾವ್ಯ, ಅದೇ ವರ್ಷ ಇಲಾಖೆಗೆ ಸೇರ್ಪಡೆಯಾಯಿತು. 9 ವರ್ಷ, 6 ತಿಂಗಳು ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಕಾವ್ಯ, ಹಲವು ಬಾಂಬ್ ಪತ್ತೆ ಕಾರ್ಯಗಳಲ್ಲಿ ಭಾಗಿಯಾಗಿತ್ತು.

ಗುರುವಾರ (ಆಗಸ್ಟ್ 31) ಶ್ವಾನ ಕಾವ್ಯಗೆ ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಜತೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News