ಬಾಬಾ ಸಿದ್ದೀಕಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಝಮೀರ್ ಅಹ್ಮದ್ ಖಾನ್

Update: 2024-10-17 15:52 GMT

ಬೆಂಗಳೂರು: ಮುಂಬೈನ ಬಾಂದ್ರಾದಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಯಿಂದ ಹತ್ಯೆಗೀಡಾದ ಮಾಜಿ ಶಾಸಕ ಹಾಗೂ ಎನ್‍ಸಿಪಿ ನಾಯಕ ಬಾಬಾ ಸಿದ್ದೀಕಿ ಅವರ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ತಮ್ಮ ಹಾಗೂ ಬಾಬಾ ಸಿದ್ದೀಕಿ ನಡುವಿನ ಸ್ನೇಹ ಸಂಬಂಧದ ಬಗ್ಗೆ ಝಮೀರ್ ಅಹ್ಮದ್ ಮೆಲುಕು ಹಾಕಿದರು. ಇದೇ ಸಂದರ್ಭದಲ್ಲಿ ಬಾಬಾ ಸಿದ್ದೀಕಿ ಅವರ ಸಹೋದರರಾದ ರಿಯಾಝ್ ಸಿದ್ದೀಕಿ ಹಾಗೂ ಅಬ್ದುಲ್ ಅಝೀಝ್ ಸಿದ್ದೀಕಿ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News