ಬೆಂಗಳೂರು ನಗರ ವಿವಿ ಘಟಿಕೋತ್ಸವ: ಅವನಿ ಶರ್ಮಾಗೆ ಚಿನ್ನದ ಪದಕ

Update: 2023-07-10 11:59 GMT

ಬೆಂಗಳೂರು, ಜು.10: ಬೆಂಗಳೂರು ನಗರ ವಿವಿಯ ಚಿತ್ರಕಲಾ ಪರಿಷತ್ ವಿದ್ಯಾರ್ಥಿನಿ ಅವನಿ ಶರ್ಮಾ ಇವರು ಕಲಾ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್ ನೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ.

ಸೋಮವಾರ ವಿವಿಯ ಜ್ಞಾನಜ್ಯೋತಿ ಸಂಭಾಗಣದಲ್ಲಿ ನಡೆದ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಅವನಿ ಶರ್ಮಾ ಚಿನ್ನದ ಪದಕ ಸ್ವೀಕರಿಸಿದರು.

ಇವರು ಮಂಗಳೂರಿನ ಮಹಾಲಸಾ ಚಿತ್ರಕಲಾ ಶಾಲೆಯಲ್ಲಿ ಪದವಿ ಪಡೆದಿದ್ದು, ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ವೇಣು ಶರ್ಮಾ ಮತ್ತು ರಶ್ಮಿ ಶರ್ಮಾ ದಂಪತಿ ಪುತ್ರಿ.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News