ಕನ್ನಡಿಗರ ಎದುರು ಮೋದಿ ಹೆಸರು ಹೇಳುವ ಮುಂಚೆ ಬಿಜೆಪಿಗರು ನೂರು ಬಾರಿ ಯೋಚಿಸಬೇಕು: ಕಾಂಗ್ರೆಸ್

Update: 2024-03-26 02:49 GMT

Photo: screenshot/twitter.com/congresskarnataka

ಬೆಂಗಳೂರು: ಮೋದಿ ವಂಚನೆಗಳಿಂದ ಬೇಸತ್ತಿರುವ ಕನ್ನಡಿಗರ ಎದುರು ಮೋದಿಯ ಹೆಸರನ್ನು ಹೇಳುವ ಮುಂಚೆ ಬಿಜೆಪಿಗರು ನೂರು ಬಾರಿ ಯೋಚಿಸಬೇಕು ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌, ಹೇಳಿದ ಯಾವ ಭರವಸೆಗಳನ್ನೂ ಈಡೇರಿಸದೆ ಮೋದಿ ಮೋದಿ ಎನ್ನುತ್ತಾ ಮತದಾರರೆದುರು ಹೋದರೆ ಬಿಜೆಪಿಗರು ಜನರಿಂದ ತಿರಸ್ಕಾರದ ಕಪಾಳಮೋಕ್ಷ ಎದುರಿಸುವುದು ನಿಶ್ಚಿತ ಎಂದು ಹೇಳಿದೆ.

ಅಯೋಗ್ಯತನವನ್ನೇ ಮೈಗೂಡಿಸಿಕೊಂಡಿರುವ ಬಿಜೆಪಿ, ವಿಧಾನಸಭೆ ಚುನಾವಣೆಯಲ್ಲಿ ಮೋದಿಯನ್ನು ಗಲ್ಲಿ ಗಲ್ಲಿಯಲ್ಲಿ ಅಲೆಸಿದಿರಿ, ಆದರೆ ಕನ್ನಡಿಗರು ಮೋದಿಯನ್ನು ಹಾಗೂ ಬಿಜೆಪಿಯನ್ನು ತಿರಸ್ಕರಿಸಿ ಕಪಾಳಮೋಕ್ಷ ಮಾಡಿ ಕಳಿಸಿದ್ದಾರೆ ಎಂದು ವ್ಯಂಗ್ಯವಾಡಿದೆ.

ʼಸ್ಮಾರ್ಟ್ ಸಿಟಿಯಾಗಲಿಲ್ಲ, 2 ಕೋಟಿ ಉದ್ಯೋಗ ನೀಡಲಿಲ್ಲ, ಕಪ್ಪು ಹಣ ತರಲಿಲ್ಲ, 15 ಲಕ್ಷ ಬರಲಿಲ್ಲ, ಮೋದಿ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಲಿಲ್ಲ. ಬರ ಪರಿಹಾರ ನೀಡದೆ ವಂಚಿಸಿದ್ದಾರೆ. GST ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡಿದ್ದಾರೆʼ ಎಂದು ಬಿಜೆಪಿಯನ್ನು ಕಾಂಗ್ರೆಸ್‌ ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News