ಬ್ರಹ್ಮಾವರ: ಸಕ್ಕರೆ ಕಾರ್ಖಾನೆ ಗುಜರಿ ಮಾರಾಟದಲ್ಲಿ ವಂಚನೆ; ತನಿಖೆಗೆ ನ್ಯಾಯಾಲಯ ಆದೇಶ

Update: 2023-10-24 03:21 GMT

ಉಡುಪಿ: ಅವಿಭಜಿತ ಉಡುಪಿ ಮತ್ತು  ದ.ಕ ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಇಲ್ಲಿ ಗುಜರಿ ಮಾರಾಟದಲ್ಲಿ 14 ಕೋಟಿಗೂ ಮಿಕ್ಕಿ ವಂಚನೆ ಮಾಡಿರುವ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ವಿರುದ್ಧ ತನಿಖೆ ನೆಡೆಸುವಂತೆ ಉಡುಪಿ ಜಿಲ್ಲಾ ರೈತ ಸಂಘ ಖಾಸಗಿ ದೂರನ್ನು ಆಡಿಷಲ್ ಸಿವಿಲ್ ಜಡ್ಜ್ ಉಡುಪಿಯಲ್ಲಿ ದಾಖಲು ಮಾಡಿದೆ. 

 ಈ ದೂರನ್ನು ವಿಚಾರಣೆ ನಡೆಸಿದ ನ್ಯಾಯಧೀಶರು  ಬೃಹತ್ ವಂಚನೆ ಕುರಿತು ಸೂಕ್ತ ತನಿಖೆ ಮಾಡಿ ಇದೇ ಡಿಸೆಂಬರ್ 12ರೊಳಗೆ ನ್ಯಾಯಾಲಯಕ್ಕೆ ವರದಿ ನೀಡಲು ಬ್ರಹ್ಮಾವರ ಪೊಲೀಸ್ ಠಾಣೆಗೆ ಆದೇಶ ಮಾಡಿದ್ದಾರೆ.

ಈ ಭ್ರಷ್ಟಾಚಾರದ ತನಿಖೆಗೆ ಆಗರಹಿಸಿ ಇತ್ತೀಚೆಗೆ ಬ್ರಹ್ಮಾವರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ರೈತ ಸಂಘಟನೆ ಬೃಹತ್ ಮಟ್ಟದ ಪ್ರತಿಭಟನೆ ನಡೆಸಿತ್ತು.

ಕಾಂಗ್ರೆಸ್ ಮುಖಂಡ ಕರಾವಳಿ ಮಲೆನಾಡು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೊಳ್ಳಿ ತೀವ್ರವಾಗಿ ಖಂಡಿಸಿ ಮಾತಾನಾಡಿ ತನಿಖೆ ನಡೆಸಲು ಆಗ್ರಹಿಸಿದ್ದರು.

ಈ ಪ್ರಕರಣದ ಕುರಿತು ನ್ಯಾಯವಾದಿ ಆರ್. ಜಗನಾಥ್ ಇವರು ವಾದ ಮಂಡಿಸಿದ್ದಾರೆ.







 


 


 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News