ಕಲಬುರಗಿ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಒತ್ತಾಯ

Update: 2023-08-31 13:06 GMT

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಆರೋಗ್ಯ ನಿರೀಕ್ಷಕ ಧನಶೆಟ್ಟಿ ಅವರ ಮೇಲೆ ಇಬ್ಬರು ಹಲ್ಲೆ ಮಾಡಿರುವ ಘಟನೆ ಬುಧವಾರ ಸಂಜೆ ವೇಳೆ ನಡೆದಿದ್ದು,  ಘಟನೆ ಖಂಡಿಸಿ ಪಾಲಿಕೆ ಸಿಬ್ಬಂದಿಗಳು ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಂಡು ಸಿಬ್ಬಂದಿಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್ ದೇವದಾಸ್, 'ಅವಿನಾಶ್ ಭಾಸ್ಕರ್ ಮತ್ತು ರಾಜು ಎಂಬ ಇಬ್ಬರು ವ್ಯಕ್ತಿಗಳು ಗುರುವಾರ ಸಂಜೆ ಕೆಎಂಪಿ ಕಚೇರಿಗೆ ಬಂದು ಕೆಎಂಪಿಯ ಆಹಾರ ನಿರೀಕ್ಷಕ ಧನಶೆಟ್ಟಿ ಅವರೊಂದಿಗೆ ಅನುಮತಿ ನೀಡುವಂತೆ ಜಗಳವಾಡಿದರು. ಜಗಳ ತಾರಕಕ್ಕೇರಿ ಧನಶೆಟ್ಟಿಯನ್ನು ಕೋಣೆಗೆ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಕೆಎಂಪಿ ಆಯುಕ್ತರು ತಿಳಿಸಿದ್ದಾರೆ.

ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ  ಹಲ್ಲೆ ನಡೆಸುವ ಘಟನೆಗಳು ನಡೆಯುತ್ತಿದ್ದು,  ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಪಾಲಿಕೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕೆಂದು ಮಹಾನಗರ ಪಾಲಿಕೆಯ ಅಧಿಕಾರಿ ಹಾಗೂ ನೌಕರರ ಸಂಘ  ಪ್ರತಿಭಟನೆ ನಡೆಸಿ, ಬಳಿಕ ಪಾಲಿಕೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್ ದೇವದಾಸ್, 'ಅವಿನಾಶ್ ಭಾಸ್ಕರ್ ಮತ್ತು ರಾಜು ಎಂಬ ಇಬ್ಬರು ವ್ಯಕ್ತಿಗಳು ಗುರುವಾರ ಸಂಜೆ ಕೆಎಂಪಿ ಕಚೇರಿಗೆ ಬಂದು ಕೆಎಂಪಿಯ ಆಹಾರ ನಿರೀಕ್ಷಕ ಧನಶೆಟ್ಟಿ ಅವರೊಂದಿಗೆ ಅನುಮತಿ ನೀಡುವಂತೆ ಜಗಳವಾಡಿದರು. ಜಗಳ ತಾರಕಕ್ಕೇರಿ ಧನಶೆಟ್ಟಿಯನ್ನು ಕೋಣೆಗೆ ಎಳೆದೊಯ್ದು ಹಲ್ಲೆ ನಡೆಸಿದ್ದಾರೆʼ ಎಂದು ತಿಳಿಸಿದರು. 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News