ಮುಡಾ ಪ್ರಕರಣ | ಲೋಕಾಯುಕ್ತ ತನಿಖೆಯಿಂದ ಸತ್ಯ ಹೊರಬರಲು ಸಾಧ್ಯವಿಲ್ಲ, ಸಿಬಿಐ ತನಿಖೆಗೆ ವಹಿಸಿ : ಛಲವಾದಿ ನಾರಾಯಣಸ್ವಾಮಿ ಆಗ್ರಹ

Update: 2024-11-06 13:32 GMT

ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ‘ಸಂಸ್ಥೆ ನಡೆಸುವ ಯಜಮಾನನನ್ನು ಆ ಸಂಸ್ಥೆಯ ಕೆಲಸಗಾರರು ಏನೆಂದು ಪ್ರಶ್ನಿಸಬಲ್ಲರು? ಅವರಿಗೆ ಪ್ರಶ್ನಿಸುವ ಧೈರ್ಯ ಬರಲು ಸಾಧ್ಯವೇ? ಲೋಕಾಯುಕ್ತ ತನಿಖೆಯಿಂದ ಸತ್ಯ ಹೊರಬರಲುಸಾಧ್ಯವಿಲ್ಲ. ಹೀಗಾಗಿ ಮುಡಾ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು ಎಂದು ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಮುಡಾ’ ಹಗರಣದ ಸಂಬಂಧ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡದೆ ಲೋಕಾಯುಕ್ತದ ಮುಂದೆ ತನಿಖೆಗೆ ಹಾಜರಾದ ವಿಚಾರ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ. ಈ ತನಿಖೆ ಒಂದು ರೀತಿಯಲ್ಲಿ ಸ್ಟೇಜ್ ಮ್ಯಾನೇಜ್ಡ್ ಅಷ್ಟೇʼ ಎಂದು ಟೀಕಿಸಿದರು.

ಸರಕಾರಿ ಕಾರು ಬಳಸಿ, ಸಿಬ್ಬಂದಿ ಕರೆದುಕೊಂಡು ಹೋಗಿ ಲೋಕಾಯುಕ್ತದ ಮುಂದೆ ಇಳಿದಿದ್ದೀರಿ. ಅಧಿಕಾರಿಗಳಿಗೆ ನಿಮ್ಮನ್ನು ಕಂಡು ಭಯ ಬಂದಿರಲೇಬೇಕು. ಅಧಿಕಾರದಲ್ಲಿರುವ ಸಿಎಂ ಆಗಿ ಲೋಕಾಯುಕ್ತದ ಮುಂದೆ ತನಿಖೆಗೆ ಹಾಜರಾಗಿದ್ದಾರೆ. ಇದು ಅವರಿಗೆ, ರಾಜ್ಯಕ್ಕೆ ಗೌರವ ತರುವುದಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News