ಚೆಕ್ ಬೌನ್ಸ್ ಪ್ರಕರಣ: ಸಚಿವ ಮಧು ಬಂಗಾರಪ್ಪಗೆ ಭಾರೀ ದಂಡ ವಿಧಿಸಿದ ನ್ಯಾಯಾಲಯ

Update: 2023-12-29 16:20 GMT

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ 6 ಕೋಟಿ 96 ಲಕ್ಷದ 70 ಸಾವಿರ ರೂ.ದಂಡ ವಿಧಿಸಿ ನಗರದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿದೆ. ದಂಡ ತೆರಲು ವಿಫಲವಾದಲ್ಲಿ 6 ತಿಂಗಳು ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದೆ.

2011ರಲ್ಲಿ ಮಧು ಬಂಗಾರಪ್ಪ ಅವರು ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಅವರ ವಿರುದ್ಧ ರಾಜೇಶ್ ಎಕ್ಸ್‌ ಪೋರ್ಟ್ ಸಂಸ್ಥೆ ದೂರು ದಾಖಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಪ್ರೀತ್ ತೀರ್ಪು ನೀಡಿದ್ದಾರೆ.

6 ಕೋಟಿ 96 ಲಕ್ಷದ 60 ಸಾವಿರ ರೂ. ದಂಡವನ್ನು ದೂರುದಾರ ಕಂಪೆನಿಗೆ ಮತ್ತು 10 ಸಾವಿರ ರೂ. ದಂಡವನ್ನು ಸರಕಾರಕ್ಕೆ ತೆರಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಮಧು ಬಂಗಾರಪ್ಪ ಅವರು ಕೋರ್ಟ್‍ನಲ್ಲಿ 50 ಲಕ್ಷ ರೂ. ನೀಡಿ ಉಳಿದ ಹಣ ಪಾವತಿಸಿಲ್ಲ. ಜ.30ರೊಳಗೆ ದಂಡ ಪಾವತಿಸುವುದಾಗಿ ಮಧು ಬಂಗಾರಪ್ಪ ಅವರು ಮುಚ್ಚಳಿಕೆ ಬರೆದು ನೀಡಿದ್ದು, ಕೋರ್ಟ್ ನಿರಾಕರಿಸಿದೆ.

ಆಕಾಶ್ ಆಡಿಯೋ ಕಂಪೆನಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಧು ಬಂಗಾರಪ್ಪ ಅವರು ರಾಜೇಶ್ಎಕ್ಸ್‌ ಪೋರ್ಟ್ ಸಂಸ್ಥೆಗೆ 6.60 ಕೋಟಿ ಬಾಕಿ ಪಾವತಿಗೆ ಚೆಕ್ ನೀಡಿದ್ದರು. ಆದರೆ, ಆ ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮಧು ವಿರುದ್ಧ 6.60 ಕೋಟಿ ಚೆಕ್‍ಬೌನ್ಸ್ ಕೇಸ್ ದಾಖಲಾಗಿತ್ತು. ಆದರೆ, ಮಧು ಬಂಗಾರಪ್ಪ ಅವರು ಜಾಮೀನು ಪಡೆದುಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News