ಜವಾಹರ್‌ ಲಾಲ್‌ ನೆಹರೂ ಆಧುನಿಕ ಭಾರತದ ಶಿಲ್ಪಿ : ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2024-11-14 07:48 GMT

ಬೆಂಗಳೂರು : ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮೊದಲ ಪ್ರಧಾನಿಯಾದ ಜವಾಹರ್ ಲಾಲ್ ನೆಹರೂ ಅವರು ಆಧುನಿಕ ಭಾರತದ ಶಿಲ್ಪಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಧಾನಸೌಧದ ಪೂರ್ವ ದಿಕ್ಕಿನ ಬಳಿ ಮಾಜಿ ಪ್ರಧಾನ ಮಂತ್ರಿಗಳಾದ ದಿವಂಗತ ಪಂಡಿತ್ ಜವಾಹರ್‌ ಲಾಲ್ ನೆಹರೂರವರ 135ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಅವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು .

ಜವಾಹರ್ ಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ನೆಹರೂ ಅವರಿಗೆ ಮಕ್ಕಳ ಬಗ್ಗೆ ಬಹಳ ಪ್ರೀತಿಯಿದ್ದುದ್ದರಿಂದ ಅವರನ್ನು ಚಾಚಾ ನೆಹರೂ ಎಂದು ಕರೆಯಲಾಗುತ್ತಿತ್ತು ಎಂದರು.

ಸುಮಾರು 17 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ದೇಶದಲ್ಲಿ ಮಿಶ್ರ ಆರ್ಥಿಕತೆ ಜಾರಿ ಮಾಡಿದರು. ಸಮಾಜವಾದಿಯಾಗಿದ್ದ ನೆಹರೂ ಕಾಂಗ್ರೆಸ್ ಪಕ್ಷವನ್ನು ಸಮಾಜವಾದಿಯಾಗಿಸಿದ ರೂವಾರಿ. ನೆಹರೂ, ಲೋಹಿಯಾ ಮೊದಲಾದವರು ಸೇರಿ ಸೋಷಿಯಲಿಸ್ಟ್ ಕಾಂಗ್ರೆಸ್ ಕಟ್ಟಿದರು. 17 ವರ್ಷಗಳಲ್ಲಿ ದೇಶದ ಅನೇಕ ಸಮಸ್ಯೆಗಳನ್ನು ಬಗೆಹರಿಸಿದರು. ಬೃಹತ್ ಕೈಗಾರಿಕೆ, ಅಣೆಕಟ್ಟು, ನೀರಾವರಿ, ಉದ್ಯೋಗ ಸೃಷ್ಟಿ ಮಾಡಿದರು. ವಿಜ್ಞಾನ ಮತ್ತು ವೈಚಾರಿಕತೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದ ನೆಹರೂ ಅವರು ಸುದೀರ್ಘ ಕಾಲ ದೇಶದ ಪ್ರಧಾನಿಯಾಗಿದ್ದರು. ಇಂದು ಆಧುನಿಕ ಭಾರತವನ್ನು ನಾವು ಕಾಣುತ್ತಿದ್ದರೆ, ಅದಕ್ಕೆ ನೆಹರೂ ಅವರ ಕೊಡುಗೆ ಅಪಾರವಾಗಿದೆ . ಆಹಾರ ಸ್ವಾವಲಂಬನೆಗೆ ನೆಹರೂ, ಇಂದಿರಾ ಗಾಂಧಿ, ಜಗಜೀವನ್ ರಾಂ ಲಾಲ್ ಬಹದ್ದೂರ್ ಶಾಸ್ತ್ರಿ ಅವರೆಲ್ಲರೂ ಕಾರಣ. ಒಂದು ಕಾಲದಲ್ಲಿ ಆಹಾರಕ್ಕೆ ಬೇರೆ ದೇಶಗಳ ಮೇಲೆ ಅವಲಂಬಿಸಿದ್ದೆವು. ಇಂದು ನಾವು ಸ್ವಾವಲಂಬಿಯಾಗಿದ್ದರೆ ಅವರು ಕಾರಣ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News