ಛಲವಾದಿ ನಾರಾಯಣಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು

Update: 2024-09-06 16:23 GMT

ಬೆಂಗಳೂರು: ರಾಜ್ಯ ಗೃಹ ಮಂಡಳಿಯಿಂದ ಶಿಕ್ಷಣ ಉದ್ದೇಶಕ್ಕಾಗಿ ಪಡೆದಿರುವ ನಿವೇಶನದಲ್ಲಿ ಬಿರಿಯಾನಿ ಹೊಟೇಲ್ ನಡೆಸಲಾಗುತ್ತಿದೆ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಜಿ.ಪ್ರಕಾಶ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಛಲವಾದಿ ನಾರಾಯಣಸ್ವಾಮಿ ರಾಜ್ಯ ಗೃಹ ಮಂಡಳಿಯಲ್ಲಿ 2002ರಿಂದ 2005ರವರೆಗೆ ನಿರ್ದೇಶಕರಾಗಿದ್ದರು. 1986ರಲ್ಲಿ ಹೊಸಕೋಟೆಯಲ್ಲಿ ರಾಜ್ಯ ಗೃಹ ಮಂಡಳಿಯವರು ವೀರೇಂದ್ರ ಸಿಂಗ್ ಸೇರಿದಂತೆ ಹಲವರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದರು. 2003ರಲ್ಲಿ ವೀರೇಂದ್ರ ಸಿಂಗ್ ಸೇರಿದಂತೆ ಇನ್ನಿತರರು ಅವರ ಭೂಮಿಯನ್ನು ತಮಗೆ ಬಿಟ್ಟುಕೊಡುವಂತೆ ಮನವಿ ಮಾಡಿದ್ದರು.

ಆದರೆ, ರಾಜ್ಯ ಗೃಹ ಮಂಡಳಿಯ ನಿರ್ದೇಶಕರಾಗಿದ್ದ ಛಲವಾದಿ ನಾರಾಯಣಸ್ವಾಮಿ, ಅವರ ಮನವಿಯನ್ನು ಇತ್ಯರ್ಥಗೊಳಿಸದೆ ಹಾಗೆ ಇರಿಸಿದರು. 2004ರಲ್ಲಿ ಆದರ್ಶ ಸೋಷಿಯಲ್ ಅಂಡ್ ಎಜುಕೇಷನಲ್ ಟ್ರಸ್ಟ್ ಸ್ಥಾಪನೆ ಮಾಡಿ ನಿವೇಶನಕ್ಕಾಗಿ ಗೃಹ ಮಂಡಳಿಗೆ ಅರ್ಜಿ ಸಲ್ಲಿಸಿದರು.

ಇದೀಗ, ಗೃಹ ಮಂಡಳಿಯಿಂದ ಪಡೆದಿರುವ ನಿವೇಶನದಲ್ಲಿ ಶಿಕ್ಷಣ ಸಂಸ್ಥೆಯ ಬದಲು ಆನಂದ್ ಧಮ್ ಬಿರಿಯಾನಿ ಎಂಬ ಹೊಟೇಲ್ ಅನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಕಾನೂನು ರೀತಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರಕಾಶ್ ತಮ್ಮ ದೂರಿನಲ್ಲಿ ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News