ದರ್ಶನ್ ಜಾಮೀನು ರದ್ದು ಪಡಿಸಲು ಕೋರ್ಟ್‍ಗೆ ಮನವಿ : ಡಾ.ಜಿ.ಪರಮೇಶ್ವರ್

Update: 2024-11-24 18:51 IST
Photo of Dr.G.Parameshwar

ಡಾ.ಜಿ.ಪರಮೇಶ್ವರ್

  • whatsapp icon

ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ನಡೆದ ಜಾಗದಲ್ಲಿ ನಟ ದರ್ಶನ್ ಇರುವ ಫೋಟೋ ಪೊಲೀಸರಿಗೆ ಸಿಕ್ಕಿರುವ ಹಿನ್ನೆಲೆ ಅದನ್ನು ನ್ಯಾಯಾಲಯದ ಮುಂದೆ ಸಲ್ಲಿಸಿ ಮಧ್ಯಂತರ ಜಾಮೀನು ರದ್ದತಿಗೆ ಮನವಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ರವಿವಾರ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಜತೆಗಿದ್ದ ಇತರೆ ಆರೋಪಿಗಳ ಮೊಬೈಲ್ ಫೋನ್‍ಗಳನ್ನು ಎಫ್‍ಎಸ್‍ಎಲ್ ವರದಿಗಾಗಿ ಹೈದರಾಬಾದ್‍ಗೆ ಕಳುಹಿಸಲಾಗಿತ್ತು. ಕೊಲೆ ನಡೆದ ಸ್ಥಳದಲ್ಲಿ ದರ್ಶನ್ ಇರುವ ಫೋಟೋಗಳು ಲಭ್ಯವಾಗಿದೆ. ಮೇಲ್ನೋಟಕ್ಕೆ ದರ್ಶನ್ ಪಾತ್ರ ದೊಡ್ಡದಾಗಿ ಕಾಣುತ್ತಿದೆ. ಹೀಗಾಗಿ ದರ್ಶನ್ ಜಾಮೀನು ರದ್ದು ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ನಟ ದರ್ಶನ್ ಬೆನ್ನು ಆಪರೇಷನ್ ಮಾಡಿಸಿಲ್ಲ. ಹಾಗೆಯೇ ಕಾಲ ಕಳೆಯುತ್ತಿದ್ದಾರೆ. ದರ್ಶನ್‍ಗೆ ಆಪರೇಷನ್ ಅಗತ್ಯ ಇಲ್ಲ ಎಂದು ಇದರಿಂದ ಗೊತ್ತಾಗುತ್ತದೆ. ಆಪರೇಷನ್ ಮಾಡದಿದ್ದರೆ ಬೆನ್ನುಮೂಳೆ ಮುರಿದು ಹೋಗುತ್ತದೆ ಎಂದು ಹೇಳುತ್ತಿದ್ದರು. ಇಷ್ಟು ದಿನವಾದರೂ ವೈದ್ಯರು ಆಪರೇಷನ್ ಮಾಡಿಲ್ಲ. ಈ ಬಗ್ಗೆ ನ್ಯಾಯಾಲಯ ಗಮನಹರಿಸಿ ಸೂಕ್ತ ಆದೇಶ ನೀಡಬೇಕು ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News