ಕೇತಗಾನಹಳ್ಳಿ ಸರಕಾರಿ ಭೂಮಿ ಒತ್ತುವರಿ ಆರೋಪ; ಎಚ್.ಡಿ.ಕುಮಾರಸ್ವಾಮಿಗೆ ಸಿಗದ ರಿಲೀಫ್

Update: 2025-04-08 23:54 IST
ಕೇತಗಾನಹಳ್ಳಿ ಸರಕಾರಿ ಭೂಮಿ ಒತ್ತುವರಿ ಆರೋಪ; ಎಚ್.ಡಿ.ಕುಮಾರಸ್ವಾಮಿಗೆ ಸಿಗದ ರಿಲೀಫ್
  • whatsapp icon

ಬೆಂಗಳೂರು : ರಾಮನಗರದ ಬಿಡದಿಯ ಕೇತಗಾನಹಳ್ಳಿ‌ ಬಳಿ ಸರಕಾರಿ ಜಮೀನು ಒತ್ತುವರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿಗೆ ಸದ್ಯಕ್ಕೆ ರಿಲೀಫ್ ಸಿಕ್ಕಿಲ್ಲ. ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮಕೈಗೊಳ್ಳುವುದಿಲ್ಲವೆಂಬ ಮುಚ್ಚಳಿಕೆಯನ್ನು ರಾಜ್ಯ ಸರಕಾರ ಹಿಂಪಡೆದುಕೊಂಡಿದೆ.

6 ಎಕರೆ ಒತ್ತುವರಿ ತೆರವು ನೋಟಿಸ್ ಪ್ರಶ್ನಿಸಿ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ಹೈಕೋರ್ಟ್ ಪೀಠ ನಡೆಸಿತು.

ಈ ವೇಳೆ ಕಂದಾಯ ಕಾಯ್ದೆ ತಿದ್ದುಪಡಿಯ ಸಂವಿಧಾನಬದ್ದತೆ ಪ್ರಶ್ನಿಸುವುದಾಗಿ ಎಚ್‌ಡಿಕೆ ವಕೀಲರ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮುಚ್ಚಳಿಕೆ ಹಿಂಪಡೆಯುವುದಾಗಿ ಎಎಜಿ ಕಿರಣ್ ರೋಣ್ ಹೇಳಿಕೆ ನೀಡಿದರು. ಹೀಗಾಗಿ ಒಂದು ವಾರದಲ್ಲಿ ತಹಸೀಲ್ದಾರ್ ಕುಮಾರಸ್ವಾಮಿ ಅವರಿಗೆ ದಾಖಲೆಗಳನ್ನು ಒದಗಿಸಬೇಕು. ಅದಾದ ಎರಡು ವಾರಗಳಲ್ಲಿ ತಹಸೀಲ್ದಾರ್ ಗೆ ಎಚ್‌ಡಿಕೆ ಉತ್ತರಿಸಬೇಕು ಎಂದು ನ್ಯಾ. ಎನ್.ಎಸ್. ಸಂಜಯಗೌಡ ಅವರಿದ್ದ ಹೈಕೋರ್ಟ್ ಪೀಠ ಸೂಚನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News