ದ್ವಿತೀಯ ಪಿಯುಸಿ ಪರೀಕ್ಷೆ-2ರ ವೇಳಾಪಟ್ಟಿ ಪ್ರಕಟ
ಸಾಂದರ್ಭಿಕ ಚಿತ್ರ | PC: pexels
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-2ರ ವೇಳಾಪಟ್ಟಿಯನ್ನು ಮಂಗಳವಾರದಂದು ಪ್ರಕಟ ಮಾಡಿದ್ದು, ಪರೀಕ್ಷೆಯು ಎ.24 ರಿಂದ ಮೇ 8ರವರೆಗೆ ನಡೆಯಲಿದೆ. ಎ.24ರಂದು ಕನ್ನಡ, ಅರೇಬಿಕ್, ಎ.25ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ, ಎ.26ರಂದು ಇತಿಹಾಸ, ಭೌತಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.
ಎ.28ರಂದು ಭೂಗೋಳಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ, ಎ.29ರಂದು ಇಂಗ್ಲೀಷ್, ಮೇ 2ಕ್ಕೆ ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ, ಗೃಹವಿಜ್ಞಾನ, ಮೇ 3ಕ್ಕೆ ಸಮಾಜಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಪರೀಕ್ಷೆಗಳು ನಡೆಯಲಿವೆ.
ಮೇ 5 ಅರ್ಥಶಾಸ್ತ್ರ, ಮೇ 6ಕ್ಕೆ ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಮೇ 7ಕ್ಕೆ ಹಿಂದಿ, ಮೇ 8ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಹಾಗೂ ಪ್ರೆಂಚ್, ಹಿಂದುಸ್ಥಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲೆನೆಸ್ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ -3 ಜೂ.9ರಿಂದ 21ರವರೆಗೆ ನಡೆಯಲಿದೆ.
ಪರೀಕ್ಷೆ-2ಕ್ಕೆ ನೋಂದಣಿ: ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳುವ ಹಾಗೂ ಅನುತ್ತೀರ್ಣರಾದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಎಲ್ಲ ವರ್ಗದ ಬಾಲಕಿಯರು ಮತ್ತು ಪರಿಶಿಷ್ಟ ಜಾತಿ, ಪಂಗಡ ಮತ್ತು ಪ್ರವರ್ಗ-1ರ ಬಾಲಕರು ಪರೀಕ್ಷೆ-2ಕ್ಕೆ ನೋಂದಣಿ ಮಾಡಿಕೊಳ್ಳಲು ಯಾವುದೇ ಪರೀಕ್ಷಾ ಶುಲ್ಕ ಇರುವುದಿಲ್ಲ. ಉಳಿದ ವಿದ್ಯಾರ್ಥಿಗಳು ದಂಡ ರಹಿತವಾಗಿ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಲು ಎ.15ರವರೆಗೆ, ದಂಡದೊಂದಿಗೆ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಲು ಎ.17ರ ವರೆಗೆ ಅವಕಾಶ ನೀಡಲಾಗಿದೆ.