ರಾಜ್ಯದ ಕಾನೂನು-ಸುವ್ಯವಸ್ಥೆಯನ್ನು ದುರ್ಬಲಗೊಳಿಸಿದ ಭ್ರಷ್ಟ ಕಾಂಗ್ರೆಸ್ ಸರಕಾರ : ಬಿಜೆಪಿ ಟೀಕೆ

ಬೆಂಗಳೂರು : ‘ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆ ಅಷ್ಟೊಂದು ದುರ್ಬಲವೇ?’ ಎಂದು ಪ್ರತಿಪಕ್ಷ ಬಿಜೆಪಿ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದೆ.
ರವಿವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ಕರ್ನಾಟಕದ ಕಾನೂನು-ಸುವ್ಯವಸ್ಥೆಯನ್ನು ಸಂಪೂರ್ಣ ದುರ್ಬಲಗೊಳಿಸಿದೆ ಭ್ರಷ್ಟ ಕಾಂಗ್ರೆಸ್ ಸರಕಾರ. ಬೀದರ್ ಹಾಗೂ ಮಂಗಳೂರಿನಲ್ಲಿ ಬ್ಯಾಂಕುಗಳ ದರೋಡೆ ನಡೆದು ನಾಲ್ಕು ದಿನವಾದರೂ ಇದುವರೆಗೂ ಅಪರಾಧಿಗಳನ್ನು ಬಂಧಿಸಿಲ್ಲ’ ಎಂದು ಟೀಕಿಸಿದೆ.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ, ತಂತ್ರಜ್ಞಾನ ಇಷ್ಟೆಲ್ಲಾ ಮುಂದುವರೆದರೂ ಅಪರಾಧಿಗಳ ಸುಳಿವು ಇನ್ನೂ ಏಕೆ ಪತ್ತೆಯಾಗಿಲ್ಲ?’ ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.
‘ಕರ್ನಾಟಕ ರಾಜ್ಯದಲ್ಲಿ ದರೋಡೆಕೋರರ ಜಾತ್ರೆ ನಡೆಯುತ್ತಿದೆ. ರೌಡಿಗಳ ಅಟ್ಟಹಾಸ ನಡೆಯುತ್ತಿದೆ. ದರೋಡೆಕೋರರಿಗೆ ಸ್ವರ್ಗದ ಸರಕಾರ ಇದಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಕಿಂಚಿತ್ತೂ ಬೆಲೆ ಇಲ್ಲದಂತಾಗಿದೆ’
ಆರ್.ಅಶೋಕ್, ಪ್ರತಿಪಕ್ಷ ನಾಯಕ