ಬೆಂಗಳೂರಿನಲ್ಲಿ ಏಕರೂಪದ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆ ಜಾರಿಗೆ ಚಿಂತನೆ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-02-13 15:32 GMT

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಏಕರೂಪ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆಯನ್ನು ಜಾರಿಗೊಳಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರು ನಗರದಲ್ಲಿ ಆಸ್ತಿ ಮಾಲೀಕತ್ವ ಮತ್ತು ನಿರ್ವಹಣಾ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಸರಕಾರ ಕೈಗೊಂಡಿರುವ ಕ್ರಮಗಳ ಕುರಿತು ಶಾಸಕ ಎಲ್.ಎ.ರವಿಸುಬ್ರಮಣ್ಯ ಅವರ ಗಮನಸೆಳೆಯುವ ಪ್ರಶ್ನೆಗೆ  ಅವರು ಉತ್ತರಿಸಿದರು.

ಫೆರಿಫೆರಲ್ ವರ್ತು ರಸ್ತೆ ಯೋಜನೆ ಶೀಘ್ರ ಜಾರಿ: ಬಿಡಿಎದಿಂದ ನಿರ್ಮಿಸಲಾಗುತ್ತಿರುವ ಫೆರಿಫೆರಲ್ ವರ್ತು ರಸ್ತೆಗೆ ಈಗಾಗಲೇ ಟೆಂಡರ್ ಅಹ್ವಾನಿಸಲಾಗಿದ್ದು,ಈ ಯೋಜನೆಗೆ 2596 ಎಕರೆ ಜಾಗ ಬೇಕಾಗಿದೆ. 220 ಎಕರೆ ಮಾತ್ರ ಸರಕಾರದ ಬಳಿಯಿದ್ದು, ಉಳಿದದ್ದು ಖಾಸಗಿಯಾಗಿರುವುದರಿಂದ ರೈತರಿಗೆ ಹೆಚ್ಚಿನ ಪರಿಹಾರ ಒದಗಿಸಿ ಆದಷ್ಟು ಶೀಘ್ರ ಈ ಯೋಜನೆ ಜಾರಿಗೊಳಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಈ ಫೆರಿಫೆರಲ್ ವರ್ತುಲ ರಸ್ತೆಗೆ ಎಕನಾಮಿಕ್ ಕಾರಿಡಾರ್ ರಸ್ತೆ ಅಂತ ನಾಮಕಾರಣ ಮಾಡಲಾವುದು ಎಂದು ಶಾಸಕ ಶೈಲೇಂದ್ರ ಬೆಲ್ದಾಳೆ ಅವರ ಪ್ರಶ್ನೆಗೆ ಡಿಸಿಎಂ ಅವರು ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News