ವಿಧ್ವಂಸಕ ಕೃತ್ಯಕ್ಕೆ ಸಂಚು ಆರೋಪ: ಶಂಕಿತರು ಎನ್‍ಐಎ ವಶಕ್ಕೆ

Update: 2023-12-18 15:14 GMT

ಸಾಂದರ್ಭಿಕ ಚಿತ್ರ Photo - PTI

ಬೆಂಗಳೂರು: ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿರುವ ಆರೋಪದಡಿ ರಾಜ್ಯದ ಐವರು ಸೇರಿ ಒಟ್ಟು ಎಂಟು ಮಂದಿ ಶಂಕಿತ ಆರೋಪಿಗಳನ್ನು ಎನ್‍ಐಎ ತನಿಖಾಧಿಕಾರಿಗಳು ಸೋಮವಾರ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ರಾಜ್ಯದ ಬಳ್ಳಾರಿ, ಬೆಂಗಳೂರು ಮಾತ್ರವಲ್ಲದೆ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ಹೊಸದಿಲ್ಲಿಯ ವಿವಿಧ 19 ಕಡೆಗಳಲ್ಲಿ ದಾಳಿ ನಡೆಸಿ, ಒಟ್ಟು ಎಂಟು ಮಂದಿ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಸುಧಾರಿತ ಸ್ಫೋಟಕ ವಸ್ತುಗಳು (ಐಇಡಿ), ನಗದು ಸೇರಿ ವಿವಿಧ ವಸ್ತುಗಳನ್ನು ಸಹ ಜಪ್ತಿ ಮಾಡಲಾಗಿದೆ.

ಇನ್ನೂ, ಬಳ್ಳಾರಿಯ ಮೀನಾಝ್ ಸುಲೇಮಾನ್ ಮತ್ತು ಸೆಯ್ಯದ್ ಸಮೀರ್ ಹಾಗೂ ಬೆಂಗಳೂರಿನಲ್ಲಿ ಮುಹಮ್ಮದ್ ಮುನಿರುದ್ದೀನ್, ಸೆಯ್ಯದ್ ಸಮೀವುಲ್ಲಾ ಹಾಗೂ ಮುಝಮ್ಮಿಲ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.

7 ಕೆಜಿ ಸೋಡಿಯಂ: ಇಲ್ಲಿನ ಆರ್.ಟಿ.ನಗರ, ಬ್ಯಾಡರಹಳ್ಳಿ, ಶಿವಾಜಿನಗರ, ಪುಲಿಕೇಶಿನಗರ, ಜಿ.ಸಿ. ನಗರದಲ್ಲಿರುವ ಹಲವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ಈ ಪೈಕಿ ಬ್ಯಾಡರಹಳ್ಳಿಯಲ್ಲಿರುವ ಶಮೀವುಲ್ಲಾ ಎಂಬುವವರ ಬಾಡಿಗೆ ಮನೆಯಲ್ಲಿ 7 ಕೆ.ಜಿ ಸೋಡಿಯಂ ನೈಟ್ರೇಟ್ ಪತ್ತೆಯಾಗಿರುವ ಮಾಹಿತಿ ಗೊತ್ತಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಎನ್‍ಐಎ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News