ಸಿರಿಧ್ಯಾನ, ಸಾವಯುವ ನೈಸರ್ಗಿಕ ಕೃಷಿಗೆ ಸರಕಾರದಿಂದ ಸಹಕಾರ: ಸಚಿವ ಚಲುವರಾಯಸ್ವಾಮಿ
ಬೆಂಗಳೂರು, ಡಿ.9: ಸಿರಿಧಾನ್ಯ ಮತ್ತು ಸಾವಯುವ ಕೃಷಿ ಆಹಾರಗಳನ್ನು ಸೇವನೆಯಿಂದ ರೋಗಮುಕ್ತರಾಗಿ ಆರೋಗ್ಯವಂತರಾಗಿ ಬಾಳಬಹುದಾಗಿದ್ದು, ಸರಕಾರವೂ ನೈಸರ್ಗಿಕ ಕೃಷಿಗೆ ಸಹಕಾರ ನೀಡಲಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಶನಿವಾರ ಬೆಂಗಳೂರಿನ ಆರ್ಟ್ ಆಫ್ ಲೀವಿಂಗ್‍ನಲ್ಲಿ ಡಿ.9ರಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷದ ಅಂಗವಾಗಿ ವಿಶ್ವ ಸಿರಿಧಾನ್ಯ ಮೇಳವನ್ನು ಉದ್ಘಾಟಿಸಿ ಅವರು ಮಾನಾಡಿದರು.
ರೈತರಿಗೆ ಸಿರಿಧಾನ್ಯ ಮೇಳದಿಂದ ಬಹುಉಪಯೋಗವಿದೆ, ಇಲ್ಲಿ ಸಿರಿಧಾನ್ಯ, ಸಾವಯುವ ಕೃಷಿ ಮಾಡುವುದರಿಂದ ರೈತರಿಗೆ ಒಳ್ಳೆಯ ಲಾಭ ಬರುತ್ತದೆ . ಇತ್ತಿಚೀಗಿನ ದಿನಗಳಲ್ಲಿ ಆರೋಗ್ಯದ ಕುರಿತು ಎಲ್ಲರು ಕಾಳಜಿ ವಹಿಸುತ್ತಿದ್ದಾರೆ, ರಾಸಾಯನಿಕ ಮುಕ್ತ, ಮನುಷ್ಯರಿಗೆ ಉತ್ತಮ ಆರೋಗ್ಯ ತರುವ ಆಹಾರ ಸೇವನೆ ಕುರಿತು ಜಾಗೃತರಾಗುತ್ತಿದ್ದಾರೆ. ಸಿರಿಧಾನ್ಯ ಮತ್ತು ಸಾವಯುವ, ನೈಸರ್ಗಿಕ ಕೃಷಿ ಉತ್ಪನ್ನಗಳ ಮೇಳ ಪ್ರತಿವರ್ಷ ಆಯೋಜನೆ ಮಾಡಿ ಸರಕಾರದ ಸಂಪೂರ್ಣ ಸಹಕಾರ ಇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಕೆವಿಕೆ ಯ ಸಾವಯುವ ಕೃಷಿ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಎಸ್.ವಿ.ಸುರೇಶ್. ಡಾ.ಬಿ.ಬೋರಯ್ಯ, ಡಾ.ನಾಗರಾಜ ಟಿ. ಈ., ನೈಸರ್ಗಿಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಂಗನಾಥ್ ಪ್ರಸಾದ್, ಸಿರಿಧಾನ್ಯ ಮತ್ತು ತೈಲ ಬೀಜ ಪರಿಣಿತ ಉದಯ ಕುಮಾರ ಕೊಳ್ಳಿಮಠ ಉಪಸ್ಥಿತರಿದ್ದರು.