ದಾಂಡೇಲಿ | ರಸ್ತೆಗುರುಳಿದ ಬೃಹತ್ ಗಾತ್ರದ ಆಲದ ಮರ: ಸಂಚಾರ ಅಸ್ತವ್ಯಸ್ತ

Update: 2023-07-20 06:50 GMT

ಉತ್ತರ ಕನ್ನಡ, ಜು.20: ಬೃಹತ್ ಗಾತ್ರದ ಆಲದ ಮರವೊಂದು ರಸ್ತೆಗೆ ಉರುಳಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಇಂದು ಬೆಳಗ್ಗೆ ದಾಂಡೇಲಿ-ಜೋಯಿಡಾ ಮುಖ್ಯ ರಸ್ತೆಯಲ್ಲಿ ಬರುವ ಬಾಮಣಗಿ ಕ್ರಾಸ್ ಬಳಿ ನಡೆದಿದೆ.

ಈ ಪರಿಸರದಲ್ಲಿ ಕಳೆದ 3-4 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಇಂದು ಬೆಳಗ್ಗೆ ಬಾಮಣಗಿ ಕ್ರಾಸ್ ಬಳಿ ಸುಮಾರು ನೂರು ವರ್ಷಗಳಷ್ಟು ಹಳೆಯದಾದ ಬೃಹತ್ ಗಾತ್ರದ ಆಲದ ಮರ ರಸ್ತೆಗಡ್ಡವಾಗಿ ಉರುಳಿಬಿದ್ದಿದೆ. ಇದರಿಂದ ಸಂಚಾರ ಸ್ಥಗಿತಗೊಂಡಿತ್ತು.

ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿಯಾದ ಗೋವಿಂದ ಭಂಡಗಿ, ಅಶೋಕ್, ಬಾಬಾ ಜಾನ್ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ನೆರವಿನಿಂದ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News