ಚಾಮರಾಜನಗರ: ಜಿಂಕೆ ಬೇಟೆ ಪ್ರಕರಣ, ಆರೋಪಿಗಳ ಬಂಧನ

Update: 2023-07-08 04:45 GMT

ಚಾಮರಾಜನಗರ: ಜಿಲ್ಲೆಯ ಎರಡು ವನ್ಯಧಾಮದಲ್ಲಿ ಜಿಂಕೆಯನ್ನು ಬೇಟೆಯಾಡಿದ್ದ 4 ಬೇಟೆಗಾರರನ್ನು ಅರಣ್ಯಾಧಿಕಾರಿಗಳು ಶುಕ್ರವಾರ ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಬಂಧಿತ ಆರೋಪಿಗಳನ್ನು ಹನೂರು ತಾಲ್ಲೂಕಿನ ಬಸಪ್ಪನದೊಡ್ಡಿ ಗ್ರಾಮದ ಮುತ್ತಪ್ಪ, ಇರ್ಫಾನ್ ಬೇಗ್, ಸಲೀಂ ಹಾಗೂ ಅಜೀಪುರ ಗ್ರಾಮದ ವೆಂಕಟೇಶ್ ಎಂದು ಗುರುತಿಸಲಾಗಿದೆ.

ಜಿಂಕೆಯನ್ನು ಬೇಟೆಯಾಡಿ ಮಲೆಮಹದೇಶ್ವರ ವನ್ಯಧಾಮದ ವಡಕೆಹಳ್ಳಿ ಅರಣ್ಯ ಪ್ರದೇಶದ ಮನೆಯೊಂದರಲ್ಲಿ ಮಾಂಸ ಸಿದ್ಧಪಡಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

11 ಕೆ.ಜಿ ಜಿಂಕೆ ಮಾಂಸ, ನಾಡಬಂದೂಕು, ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ .

ವಲಯ 'ಅರಣ್ಯಾಧಿಕಾರಿ ಪ್ರವೀಣ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿಗಳಾದ ಸಾಲನ್, ಪ್ರಸಾದ್, ಅರಣ್ಯ ಪಾಲಕರಾದ ಪರಶುರಾಮ್, ಅನಿಲ್ ಕುಮಾರ್ ಅರಣ್ಯ ರಕ್ಷಕರಾದ ಗಣೇಶ್, ಪ್ರಭು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News