ವಿಧಾನ ಮಂಡಲ ಅಧಿವೇಶನ ವಿಳಂಬವಾಗಿ ಆರಂಭ: ಸದಸ್ಯರಿಂದ ಆಕ್ಷೇಪ

Update: 2023-12-04 07:55 GMT

ಬೆಳಗಾವಿ, ಡಿ.4: ಇಲ್ಲಿನ ಸುವರ್ಣ ವಿಧಾನ ಸೌಧದಲ್ಲಿ ಇಂದಿನಿಂದ ಎರಡು ವಾರಗಳ ನಡೆಯಲಿರುವ ಚಳಿಗಾಲದ ಅಧಿವೇಶನ ಇಂದು ಆರಂಭಗೊಂಡಿದೆ.

ಕಲಾಪವು ನಿಗದಿತ ಸಮಯಕ್ಕಿಂತ ವಿಳಂಬವಾಗಿ ಆರಂಭಗೊಂಡಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ಅಧಿವೇಶನ ಆರಂಭಗೊಳ್ಳುತ್ತಿದ್ದಂತೆ ಮಾತನಾಡಿದ ಮಾಜಿ ಸಚಿವ ಸುರೇಶ್ ಕುಮಾರ್, ಮೊದಲ ದಿನವೇ ಕಲಾಪ ಒಂದು ಗಂಟೆ ವಿಳಂಬವಾದರೆ ಹೇಗೆ ? ಇದರಿಂದ ರಾಜ್ಯಕ್ಕೆ ನಾವು ಯಾವ ಸಂದೇಶ ಕಳುಹಿಸುತ್ತಾ ಇದ್ದೇವೆ? ಏನೂ ಕಾರಣವಿಲ್ಲದೆ ಇಷ್ಟು ವಿಳಂಬ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ, ಸದನ ವಿಳಂಬವಾಗುವುದು ಬೇಡ, ಸರಿಯಾದ ಸಮಯಕ್ಕೆ ಶುರುವಾಗಲಿ ಮನವಿ ಮಾಡಿದರು.

ಬೆಳಗಾವಿಯಲ್ಲಿ ಅಧಿವೇಶನ ಯಾವಾಗಲೂ ಸರಿಯಾಗಿ ನಡೆಯುವುದಿಲ್ಲ ಎಂದು ಪತ್ರಿಕೆಗಳಲ್ಲಿ ಬರುತ್ತವೆ, ಜನರೂ ಮಾತನಾಡಿಕೊಳ್ಳುತ್ತಾರೆ. ಇದರಿಂದ ಉತ್ತರ ಕರ್ನಾಟಕಕ್ಕೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ನಿಗದಿತ ಸಮಯಕ್ಕೆ ಕಲಾಪ ಆರಂಭಿಸುವ ಅಧಿಕಾರ ಇದೆ. ಯಾರು ಬರಲಿ ಬರದಿರಲಿ, ನೀವು ಸರಿಯಾದ ಸಮಯಕ್ಕೆ ಕಲಾಪ ಆರಂಭಿಸಿ ಎಂದು ಸ್ಪೀಕರ್ ರಲ್ಲಿ ರಾಯರೆಡ್ಡಿ ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News