ಪರೀಕ್ಷೆಯ ಪ್ರಶ್ನೆಗಳನ್ನು ಅನುವಾದ ಮಾಡಿದ್ದು ಭಾಷಾಂತರಕಾರರೇ: ಕೆಪಿಎಸ್ ಸಿ ಸ್ಪಷ್ಟನೆ

Update: 2024-08-30 06:01 GMT
Photo: kpsc.kar.nic.in

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸಲಾಗುವ ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಭಾಷಾಂತರ ಕಾರ್ಯವು ಭಾಷಾಂತರ ಇಲಾಖೆಯಿಂದ ನಿಯೋಜಿಸಲ್ಪಡುವ ಭಾಷಾಂತರಕಾರರಿಂದ ಮಾಡಲಾಗುತ್ತದೆ. ಯಾವುದೇ ಗೂಗಲ್ ಭಾಷಾಂತರ ಹಾಗೂ ಕೃತಕ ಬುದ್ಧಿಮತ್ತೆ(ಎಐ)ಗಳನ್ನಾಗಲಿ ಬಳಸಲಾಗುತ್ತಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟನೆ ತಿಳಿಸಿದೆ.

ಆಯೋಗದಿಂದ ನಡೆಸಲಾಗುವ ಪರೀಕ್ಷೆಗಳಿಗೆ ಸಂಬಂಧಿಸಿ ಕೆಲವು ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಆಯೋಗದ ಪ್ರಶ್ನೆಪತ್ರಿಕೆಗಳ ಭಾಷಾಂತರಕ್ಕೆ ಸಂಬಂಧಿಸಿ ಆಕ್ಷೇಪ ವ್ಯಕ್ತಪವಾಗುತ್ತಿದೆ. ಆದರೆ ಭಾಷಾಂತರ ಕಾರ್ಯವು ಆಯೋಗದ ಕಚೇರಿಯಲ್ಲೇ ನಡೆದಿದೆ. ಗೂಗಲ್ ಅಥವಾ ಕೃತಕ ಬುದ್ಧಿಮತ್ತೆ ಬಳಸಿಲ್ಲ. ಇಂತಹ ತಂತ್ರಾಂಶಗಳನ್ನು ಪ್ರಶ್ನೆಗಳ ಭಾಷಾಂತರದಲ್ಲಿ ಬಳಸಲು ಕೆಪಿಎಸ್ ಸಿ ನಿಯಮಗಳಲ್ಲೂ ಅವಕಾಶವಿಲ್ಲ ಎಂದು ಆಯೋಗದ ಕಾರ್ಯದರ್ಶಿ ರಾಕೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಪ್ರಶ್ನೆಪತ್ರಿಕೆಗಳಲ್ಲಿನ ಪ್ರಶ್ನೆಗಳಲ್ಲಿ ಅಥವಾ ಪ್ರಶ್ನೆಗಳ ಭಾಷಾಂತರದಲ್ಲಿ ತೀರಾ ಗೊಂದಲವುಂಟಾದಲ್ಲಿ, ಆಯೋಗದಿಂದ ಪ್ರಕಟಿಸಲಾಗುವ ಕೀ-ಉತ್ತರಗಳಿಗೆ ಅಭ್ಯರ್ಥಿಗಳು ಆಕ್ಷೇಪಗಳನ್ನು ಸಲ್ಲಿಸಬಹುದು. ಈ ಎಲ್ಲಾ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ವಿಷಯ ತಜ್ಞರುಗಳ ಸಮಿತಿಯ ಅಭಿಪ್ರಾಯವನ್ನು ಪಡೆದು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟನೆಯಲ್ಲಿ ಅವರು ತಿಳಿಸಿದ್ದಾರೆ.

ಆಕ್ಷೇಪಕ್ಕೆ ಸೆ.4ರವರೆಗೆ ಅವಕಾಶ:

ಪೂರ್ವಭಾವಿ ಪರೀಕ್ಷೆಯ ಕೀ ಉತ್ತರಗಳನ್ನು ಕೆಪಿಎಸ್ ಸಿ ಬಿಡುಗಡೆ ಮಾಡಿದೆ. ಆಕ್ಷೇಪ ಸಲ್ಲಿಸಲು ಸೆ.4ರವರೆಗೆ ಅವಕಾಶ ನೀಡಿದೆ. ಆಕ್ಷೇಪಗಳನ್ನು ಅಂದು ಸಂಜೆ 5:30ರ ಒಳಗೆ ಆಯೋಗಕ್ಕೆ ಸಲ್ಲಿಸಲು ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News