ರೇಷನ್‌ ಕಾರ್ಡ್‌ ತಿದ್ದುಪಡಿ/ಸೇರ್ಪಡೆಗೆ ಅವಧಿ ವಿಸ್ತರಣೆ: ಮನೆ ಯಜಮಾನಿ ಹೆಸರನ್ನು ಬದಲಾಯಿಸಿ ʼಗೃಹಲಕ್ಷ್ಮಿʼ ಯೋಜನೆಗೆ ಅರ್ಜಿ ಹಾಕಲು ಅವಕಾಶ

Update: 2023-09-06 05:06 GMT

ಬೆಂಗಳೂರು: ರೇಷನ್‌ ಕಾರ್ಡ್‌ ತಿದ್ದುಪಡಿಗೆ ನೀಡಲಾಗಿದ್ದ ಅವಧಿಯನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಸೆಪ್ಟೆಂಬರ್‌ 14ವರೆಗೂ ವಿಸ್ತರಣೆ ಮಾಡಲಾಗಿದೆ. ಇದರಿಂದ ಯಜಮಾನರ ಸ್ಥಾನದಲ್ಲಿ ಮಹಿಳೆಯರು ಹೆಸರಿಲ್ಲದ ಕಾರಣ  ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕದ ಮಹಿಳೆಯರಿಗೆ ಸದ್ಯ ಅವಕಾಶ ಸಿಕ್ಕಿದೆ. 

ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಟ್ವೀಟ್‌ ಮಾಡಿ ಮಾಹಿತಿ ನೀಡಿದೆ.

ʼʼಪಡಿತರ ಚೀಟಿಯಲ್ಲಿ ತಿದ್ದುಪಡಿ/ಸೇರ್ಪಡೆಗೆ ಅವಧಿಯನ್ನು ವಿಸ್ತರಿಸಲಾಗಿದ್ದು, ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳದವರು ಸೆಪ್ಟೆಂಬರ್ 09 ರಿಂದ 14 ರೊಳಗೆ ಯಜಮಾನಿಯ ಸ್ಥಾನದಲ್ಲಿ ತಿದ್ದುಪಡಿ ಮಾಡಿಕೊಂಡು, ಯೋಜನೆಗೆ ನೋಂದಾಯಿಸಿ ಸೌಲಭ್ಯ ಪಡೆಯಬಹುದಾಗಿದೆʼʼ ಎಂದು ಇಲಾಖೆ ತಿಳಿಸಿದೆ. 

ʼʼಗೃಹ ಲಕ್ಷ್ಮಿ ಯೋಜನೆಯಡಿ ಈಗಾಗಲೇ ನೋಂದಾಯಿಸಿ ರೇಷನ್‌ ಕಾರ್ಡ್‌ ನಲ್ಲಿ ಯಜಮಾನಿ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಲ್ಲಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಈ ಅರ್ಜಿ ಇತ್ಯರ್ಥಗೊಳ್ಳುವವರೆಗೂ ಗೃಹಲಕ್ಷ್ಮಿಯೋಜನೆಯ ಲಾಭ ತಡೆಹಿಡಿಯಲಾಗುತ್ತದೆʼʼ ಎಂದು ಇಲಾಖೆ ಮಾಹಿತಿ ನೀಡಿದೆ. 

 ಈ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರೇಷನ್‌ ಕಾರ್ಡ್‌ ತಿದ್ದುಪಡಿಗೆ ಸೆಪ್ಟೆಂಬರ್‌ 1 ರಿಂದ 10ವರೆಗೂ ಮಾತ್ರ ಕಾಲಾವಕಾಶ ನೀಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News