ಕೋವಿಡ್-19 ಅಕ್ರಮದ ವಿಚಾರಣಾ ಆಯೋಗದ ಅವಧಿ ವಿಸ್ತರಣೆ

Update: 2024-05-26 15:00 GMT

ಬೆಂಗಳೂರು : ಕೋವಿಡ್-19 ಅಕ್ರಮದ ವಿಚಾರಣಾ ಆಯೋಗದ ಅವಧಿಯನ್ನು ಎರಡನೇ ಬಾರಿಗೆ ವಿಸ್ತರಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದ ತನಿಖಾ ಆಯೋಗದ ಅವಧಿಯನ್ನು ಮೇ 25ರಿಂದ ಆ.31ರ ವರೆಗೆ ಮೂರು ತಿಂಗಳು ವಿಸ್ತರಿಸಿ ಆದೇಶಿಸಿದೆ.

2023ರ ಆ.25ರಂದು ಏಕ ಸದಸ್ಯ ತನಿಖಾ ಆಯೋಗ ರಚಿಸಿದ್ದ ಸರಕಾರ ಅದರ ಅವಧಿಯನ್ನು ನ.22ಮೊದಲ ಬಾರಿ ವಿಸ್ತರಣೆ ಮಾಡಿತ್ತು. ಈಗ ಎರಡನೇ ಬಾರಿ ವಿಚಾರಣಾ ಆಯೋಗದ ಅವಧಿಯನ್ನು ವಿಸ್ತರಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ನಿವಾರಣೆ ಹಾಗೂ ತಡೆಗಟ್ಟುವಿಕೆ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಇತರೆ ಇಲಾಖೆಗಳು ಸೇರಿ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ ಔಷಧಿ, ಉಪಕರಣಗಳು ಹಾಗೂ ಸಾಮಗ್ರಿಗಳ ಖರೀದಿ, ಆಮ್ಲಜನಕ ನಿರ್ವಹಣೆ, ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳು ಹಾಗೂ ಇತ್ಯಾದಿ ವಿಷಯಗಳ ಕುರಿತು 2021ರ ಜುಲೈ-ಆಗಸ್ಟ್ ನಲ್ಲಿ ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನೀಡಿರುವ ವರದಿಯಲ್ಲಿನ ಗಂಭೀರವಾದ ಆರೋಪಗಳ ಬಗ್ಗೆ ತನಿಖೆ ನಡೆಸಲು ತೀರ್ಮಾನಿಸಿತ್ತು.

ವಿಚಾರಣಾ ಆಯೋಗದ ಅವಧಿಯು ಮೇ 24ಕ್ಕೆ ಕೊನೆಗೊಳ್ಳಲಿರುವುದರಿಂದ, ಈಗ ಮೂರು ತಿಂಗಳ ಕಾಲ ವಿಚಾರಣಾ ಆಯೋಗವನ್ನು ವಿಸ್ತರಿಸಲು ಆಯೋಗದ ಅಧ್ಯಕ್ಷರು ಕೋರಿದ್ದರು. ಅದರಂತೆ ಇದೀಗ ಮೂರನೇ ಬಾರಿ ವಿಚಾರಣಾ ಆಯೋಗದ ಅವಧಿಯನ್ನು ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News