ಉದ್ಯೋಗ ನೇಮಕಾತಿ ಏಜೆಂಟ್‍ಗಳಿಂದ ಅಕ್ರಮ: ಎಚ್ಚರಿಕೆ ವಹಿಸಲು ರಾಜ್ಯ ಸರಕಾರದ ಸೂಚನೆ

Update: 2024-04-04 18:06 GMT

ಸಾಂದರ್ಭಿಕ ಚಿತ್ರ (credit: jobnexus.com)

ಬೆಂಗಳೂರು: ನೋಂದಣಿಯಾಗದ ನೇಮಕಾತಿ ಏಜೆಂಟರಿಂದ ನಕಲಿ ಉದ್ಯೋಗದ ಆಮಿಷಕ್ಕೆ ಒಳಗಾಗುವ ವಿದೇಶಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಈ ಕುರಿತು ಎಚ್ಚರಿಕೆ ವಹಿಸುವಂತೆ ರಾಜ್ಯ ಸರಕಾರ ಸೂಚನೆ ನೀಡಿದೆ.

ವಿದೇಶದಲ್ಲಿ ಕೆಲಸ ಮಾಡಲು ನೇಮಕಾತಿ ಮಾಡುವುದಕ್ಕೆ ಏಜೆನ್ಸಿಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಆದರೆ ಏಜೆಂಟ್‍ಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಪರವಾನಗಿ ಪಡೆಯದೆ ಕಾರ್ಯನಿರ್ವಹಿಸುತ್ತಿರುವುದು ವರದಿಯಾಗುತ್ತಿದೆ.

ಹಲವು ಅಕ್ರಮ ಏಜೆಂಟ್‍ಗಳು ಫೇಸ್‍ಬುಕ್, ವಾಟ್ಸಾಪ್, ಟೆಕ್ಸ್ಟ್ ಮೆಸೇಜ್ ಮತ್ತು ಇತರ ಮಾಧ್ಯಮಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ನೋಂದಣಿಯಾಗದ ನೇಮಕಾತಿ ಏಜೆಂಟರು ಹೆಚ್ಚುವರಿಯಾಗಿ ರೂ.2 ಲಕ್ಷದಿಂದ ರಿಂದ 5 ಲಕ್ಷ ರೂ. ಗಳ ವರೆಗೆ ಶುಲ್ಕ ವಿಧಿಸುತ್ತಿದ್ದಾರೆ.

ಈ ಏಜೆನ್ಸಿಗಳು ಇರುವಿಕೆ ಮತ್ತು ಅವರನ್ನು ಸಂಪರ್ಕಿಸುವ ಬಗ್ಗೆ ಬಹಳ ಕಡಿಮೆ ವಿವರಗಳನ್ನು ಒದಗಿಸುತ್ತವೆ ಅಥವಾ ಯಾವುದೇ ವಿವರಗಳನ್ನು ಒದಗಿಸುವುದಿಲ್ಲ. ಸಾಮಾನ್ಯವಾಗಿ ಕೇವಲ ವಾಟ್ಸಾಪ್ ಮೂಲಕ ಮಾತ್ರವೇ ಸಂವಹನ ನಡೆಸುತ್ತಾರೆ. ಇದರಿಂದಾಗಿ ಕರೆ ಮಾಡಿದವರ ಸ್ಥಳವನ್ನು ಮತ್ತು ಅವರನ್ನು ಗುರುತಿಸುವುದು ಮತ್ತು ಅವರು ಕೊಡಮಾಡುವ ಕೆಲಸದ ಕುರಿತಂತೆ ಅದರ ನೈಜತೆಯನ್ನು ಖಚಿತಪಡಿಸಿಕೊಳ್ಳುವುದು ಕಷ್ಟವಾಗುತ್ತದೆ.

ಮಾನ್ಯತೆ ಇರುವ ನೇಮಕಾತಿ ಏಜೆಂಟ್, ವಿದೇಶದಲ್ಲಿರುವ ಉದ್ಯೋಗದಾತ ಮತ್ತು ವಲಸೆ ಹೋಗಲು ಬಯಸುವ ಕೆಲಸಗಾರರೊಂದಿಗೆ ಒಪ್ಪಂದ ಏರ್ಪಡಿಸುತ್ತವೆ. ಸಾಮಾನ್ಯವಾಗಿ, ಪ್ರತಿಷ್ಠಿತ ವಿದೇಶಿ ಉದ್ಯೋಗದಾತರು ವಿಮಾನ ದರ, ಊಟ, ವಸತಿ ಮತ್ತು ವಿಮೆಯ ವೆಚ್ಚವನ್ನು ಒದಗಿಸುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News