ರೈತರ ಹಿತರಕ್ಷಣೆ ಸರಕಾರದ ಆದ್ಯತೆ: ಸಚಿವ ಚಲುವರಾಯಸ್ವಾಮಿ

Update: 2023-12-30 13:02 GMT

ಬೆಂಗಳೂರು: ರೈತರ ಹಿತಕಾಯಲು ರಾಜ್ಯ ಸರಕಾರ ಆದ್ಯತೆ ನೀಡುತ್ತಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 7,500ಕೋಟಿ ರೂ.ಗಳನ್ನು ಕೃಷಿ ಕುಟುಂಬಗಳಿಗೆ ತಲುಪಿಸಲಾಗುತ್ತಿದೆ ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಶನಿವಾರ ಹೆಬ್ಬಾಳದ ಪಶು ವೈದ್ಯಕೀಯ ಪರಿಷತ್ ಸಭಾಂಗಣದಲ್ಲಿ ರಾಜ್ಯ ಬೀಜ ನಿಗಮದ ನಿರ್ದೇಶಕ ಮಂಡಳಿ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದ 223 ತಾಲೂಕುಗಳಲ್ಲಿ ಬರ ಸ್ಥಿತಿ ಇದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಪರಿಹಾರಕ್ಕೆ ಮನವಿ ಸಲ್ಲಿಸಿದ್ದಾರೆ. ರೈತರ ಸಂಕಷ್ಟ ನಿವಾರಣೆ ಸರಕಾರದ ಜವಾಬ್ದಾರಿಯಾಗಿದ್ದು ಅದನ್ನು ನಿಭಾಯಿಸಲಿದೆ ಎಂದರು

 ರೈತರ ಬದುಕು ಬವಣೆಗಳ ಬಗ್ಗೆ ಸ್ವಂತ ಅನುಭವ ಇದೆ. ಅವರ ಸಮಸ್ಯೆಗಳನ್ನು ಸರಿಪಡಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. ರಾಜ್ಯದಲ್ಲಿ ವಿಚಕ್ಷಣ ದಳವನ್ನು ಚುರುಕುಗೊಳಿಸಿದ್ದು, ನಕಲಿ ಹಾಗೂ ಕಳಪೆ ಬಿತ್ತನೆ ಬೀಜ, ರಸಗೊಬ್ಬರ, ಔಷಧಿಗಳ ಮಾರಾಟ ಸಾಗಾಟವನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ ಎಂದು ಹೇಳಿದರು

2022-23ನೆ ಸಾಲಿನಲ್ಲಿ ರಾಜ್ಯ ಬೀಜ ನಿಗಮವು ವಿವಿಧ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಮಾರಾಟದಿಂದ ಒಟ್ಟು 494.50ಕೋಟಿ ರೂ.ವಹಿವಾಟು ಮಾಡಿ 7.65ಕೋಟಿ ರೂ.ಗಳ ತೆರಿಗೆ ನಂತರದ ಲಾಭ ಗಳಿಸಿರುತ್ತದೆ. ಇದು 49 ವರ್ಷಗಳಲ್ಲಿ ನಿಗಮವು ವ್ಯಾಪಾರ ವಹಿವಾಟಿನಲ್ಲಿ ಗಳಿಸಿರುವ ಅತಿ ಹೆಚ್ಚಿನ ಲಾಭ ಎಂದು ಚಲುವರಾಯಸ್ವಾಮಿ ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News