BBMP ಚುನಾವಣೆಗೆ ಸರಕಾರ ಸಜ್ಜು: ವಾರ್ಡ್‍ಗಳ ಸಂಖ್ಯೆ 225ಕ್ಕೆ ಇಳಿಕೆ ಮಾಡಿ ಆದೇಶ
Update: 2023-08-04 15:49 GMT
ಬೆಂಗಳೂರು, ಆ.4: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ರಾಜ್ಯ ಸರಕಾರ ಸಜ್ಜಾಗಿದ್ದು, 225 ವಾರ್ಡ್‍ಗಳನ್ನು ನಿಗದಿ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ.
ಬಿಬಿಎಂಪಿ ಈ ಹಿಂದೆ 198 ವಾರ್ಡುಗಳನ್ನು ಹೊಂದಿತ್ತು. ಬಿಜೆಪಿ ಸರಕಾರ ವಾರ್ಡುಗಳನ್ನು ಪುನರ್ ವಿಂಗಡಣೆ ಮಾಡಿ 243ಕ್ಕೆ ಹೆಚ್ಚಿಸಿತ್ತು. ಆದರೆ, ಇದೀಗ ಕಾಂಗ್ರೆಸ್ ಸರಕಾರವು ವಾರ್ಡುಗಳ ಸಂಖ್ಯೆಯನ್ನು 225 ನಿಗದಿಗೊಳಿಸಿ ಹೊಸ ಆದೇಶವನ್ನು ಹೊರಡಿಸಿದೆ.
ʼʼಬಿಬಿಎಂಪಿ ಚುನಾವಣೆಗೆ ಸಿದ್ಧʼʼ
12 ವಾರಗಳೊಳಗೆ ವಾರ್ಡ್ ವಿಂಗಡನೆ ಮಾಡುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಅದಾದ ನಂತರ ನ್ಯಾಯಾಲಯ ಬಹುತೇಕ ಬಿಬಿಎಂಪಿ ಚುನಾವಣೆ ಕೈಗೊಳ್ಳಲು ಸೂಚಿಸುತ್ತದೆ. ಹಾಗಾಗಿ ನಾವು ಚುನಾವಣೆ ಮಾಡಲು ತಯಾರಾಗಿದ್ದೇವೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ