‘ಝೀಕಾ ವೈರಸ್’ ಸೋಂಕಿಗೆ ಮಾರ್ಗಸೂಚಿ ಪ್ರಕಟ

Update: 2024-08-17 17:19 GMT

PC : indiatoday.in

ಬೆಂಗಳೂರು : ಝೀಕಾ ವೈರಸ್ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ಡೆಂಗಿ ಜ್ವರದಂತೆ ರೋಗ ಲಕ್ಷಣಗಳಿಗೆ ಸಂಬಂಧಿಸಿ ಆರೋಗ್ಯ ಇಲಾಖೆಯು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಗರ್ಭಿಣಿಯರು ಝೀಕಾ ವೈರಸ್ ಸೋಂಕಿತರಾದಲ್ಲಿ ಹುಟ್ಟುವ ಮಗುವಿನಲ್ಲಿ ಮೈಕ್ರೋಸಫಾಲಿ ಹಾಗೂ ಇನ್ನಿತರ ನರಸಂಬಂಧಿ ಅಂಗವೈಕಲ್ಯಗಳು ಮತ್ತು ದೃಷ್ಟಿ ದೋಷ ಉಂಟಾಗುವ ಸಾಧ್ಯತೆಯು ಅಧಿಕವಾಗಿರುತ್ತದೆ. ಆದುದರಿಂದ ಝೀಕಾ ವೈರಸ್ ಸೋಂಕಿನ ನಿಯಂತ್ರಣಕ್ಕಾಗಿ ಆಯಾ ಜಿಲ್ಲಾಡಳಿತದ ಮೇಲ್ವಿಚಾರಣೆಯಲ್ಲಿ ಕಟ್ಟುನಿಟ್ಟಾಗಿ ಕೈಗೊಳ್ಳಲು ಸೂಚಿಸಿದೆ.

ಝೀಕಾ ವೈರಸ್ ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ಆದುದರಿಂದ ಎಲ್ಲೆಡೆಯಲ್ಲಿ ಅಂದರೆ, ಗ್ರಾಮೀಣ, ಅರೆ-ನಗರ ಪ್ರದೇಶ, ವಲಸೆ ಕಾರ್ಮಿಕರ ವಾಸಸ್ಥಳಗಳು ಹಾಗೂ ನಗರ ಪ್ರದೇಶಗಳಲ್ಲಿನ ಮನೆಗಳು ಇತ್ಯಾದಿಗಳ ಒಳಾಂಗಣ, ಹೊರಾಂಗಣದಲ್ಲಿರುವ ನೀರಿನ ಸಂಗ್ರಹಣಾ ಪರಿಕರಗಳಲ್ಲಿ ಈಡೀಸ್ ಲಾರ್ವಾಗಳನ್ನು ನಿರ್ಮೂಲನೆ ಮಾಡುವಂತೆ ತಿಳಿಸಿದೆ.

ಝೀಕಾ ಸೋಂಕಿನ ಲಕ್ಷಣಗಳು ಸಾಮಾನ್ಯವಾಗಿ ಸೌಮ್ಯ ಸ್ವರೂಪದ್ದಾಗಿದ್ದು, ಜ್ವರ, ಕೆಂಪಾದ ಕಣ್ಣುಗಳು, ತಲೆನೋವು, ಗಂಧೆಗಳು, ಸ್ನಾಯು ಮತ್ತು ಕೀಲುಗಳಲ್ಲಿ ನೋವು, ಈ ಲಕ್ಷಣಗಳನ್ನು ಹೊಂದಿದವರು ಹತ್ತಿರದ ಆರೋಗ್ಯ, ಸಂಸ್ಥೆಗೆ ಭೇಟಿ ನೀಡಿ ಅಗತ್ಯ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದಿದೆ.

ಶಂಕಿತ/ ದೃಢ ಝೀಕಾ ಸೋಂಕಿನ ಪ್ರಕರಣಗಳು ಪ್ರತ್ಯೇಕವಾಗಿದ್ದು, ಅಗತ್ಯ ವಿಶ್ರಾಂತಿಯನ್ನು ಪಡೆಯಬೇಕು. ದ್ರವರೂಪದ ಆಹಾರವನ್ನು ಹೆಚ್ಚಿಗೆ ಸೇವಿಸಬೇಕು ಹಾಗೂ ಮಲಗುವಾಗ, ವಿಶ್ರಾಂತಿ ಪಡೆಯುವಾಗ (ಹಗಲು ಹೊತ್ತಿನಲ್ಲಿಯೂ) ಸೊಳ್ಳೆ ಪರದೆಯನ್ನು ಬಳಸಬೇಕು ಎಂದು ಹೇಳಿದೆ.

ಕಂಟೇನ್ಮೆಂಲಟ್ ವಲಯದಲ್ಲಿರುವ ಗರ್ಭಿಣಿಯರು ಸೀರಂ ಮತ್ತು ಮೂತ್ರದ ಮಾದರಿಯನ್ನು ಝೀಕಾ ವೈರಸ್ ಪರೀಕ್ಷೆಗೆ ಸಲ್ಲಿಸಬೇಕು. ಸ್ಕ್ಯಾನಿಂಗ್ ವರದಿಯನ್ನು ತಜ್ಞರಿಂದ ವಿಶ್ಲೇಷಿಸಬೇಕು. ದೇಹವನ್ನು ಸಂಪೂರ್ಣವಾಗಿ ಮುಚ್ಚುವಂತೆ ಬಟ್ಟೆಯನ್ನು ಧರಿಸುವುದು, ಸೊಳ್ಳೆ ವರದೆಯ ಬಳಕೆಯೂ ಸೇರಿದಂತೆ ಇತರ ಸ್ವಯಂ ರಕ್ಷಣಾ ವಿಧಾನಗಳನ್ನು ಸಾರ್ವಜನಿಕರು ಪಾಲಿಸುವುದು ಅಗತ್ಯವಾಗಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News