"ಪತ್ನಿ ಮುಸ್ಲಿಂ ಆದ ಮಾತ್ರಕ್ಕೆ ಅರ್ಧ ಪಾಕಿಸ್ತಾನಿ ಎಂದು ಹೇಳಬಾರದು" : ಯತ್ನಾಳ್‌ಗೆ ಹೈಕೋರ್ಟ್ ತರಾಟೆ
ಬೆಂಗಳೂರು : "ತಲೆಗೆ ಬರುವುದನ್ನೆಲ್ಲಾ ಏಕೆ ಮಾತನಾಡುತ್ತಾರೆ. ಪತ್ನಿ ಮುಸ್ಲಿಂ ಆದ ಮಾತ್ರಕ್ಕೆ ಅರ್ಧ ಪಾಕಿಸ್ತಾನಿ ಎಂದು ಹೇಳಬಾರದು" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಸಚಿವ ದಿನೇಶ್ ಗುಂಡೂರಾವ್ ದಾಖಲಿಸಿದ್ದ ಮಾನನಷ್ಟ ಪ್ರಕರಣ ರದ್ದು ಕೋರಿ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು. ಈ ವೇಳೆ ಯತ್ನಾಳ್ ಪರ ವಕೀಲರು ಅರ್ಧ ಪಾಕಿಸ್ತಾನಿ ಎಂದು ಹೇಳಿದ್ದು, ಆ ಅರ್ಥದ್ದಲ್ಲಲ್ಲ. ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಹೇಳಿಕೆ ಎಂದು ವಾದ ಮಂಡಿಸಿದರು.
ಚುನಾವಣೆ ವೇಳೆ ಪರಸ್ಪರ ಕೆಸರೆರಚಾಟ ಬಿಡಬೇಕು.ಪತ್ನಿ ಮುಸ್ಲಿಂ ಆದ ಮಾತ್ರಕ್ಕೆ ಅರ್ಧ ಪಾಕಿಸ್ತಾನಿ ಎಂದು ಹೇಳಬಾರದು ನ್ಯಾಯಮೂರ್ತಿ.ಎಂ. ನಾಗಪ್ರಸನ್ನ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ ಪ್ರಕ್ರಿಯೆಯಲ್ಲಿ ಲೋಪವಿರುವುದರಿಂದ ವಿಚಾರಣಾ ನ್ಯಾಯಾಲಯಕ್ಕೆ ಪ್ರಕರಣ ವಾಪಸ್ ಕಳಿಸುವ ಬಗ್ಗೆ ಸೆ.23ರಂದು ಸೂಕ್ತ ಆದೇಶ ಹೊರಡಿಸಲಾಗುವುದು ನ್ಯಾಯಪೀಠ ಹೇಳಿದೆ.