ಹೊಸಪೇಟೆ | ಫೆಲೆಸ್ತೀನ್ ಪರ ವಾಟ್ಸಪ್‌ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ ಆರೋಪ; ಯುವಕನ ಬಂಧನ
ಹೊಸಪೇಟೆ: ಫೆಲೆಸ್ತೀನ್ ಪರವಾಗಿ ಸಾಮಾಜಿ ಮಾಧ್ಯಮ ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ ಆರೋಪದ ಮೇರೆಗೆ ಯುವಕನೋರ್ವನನ್ನು ಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಪಟ್ಟಣದ ಸಿದ್ಧಲಿಂಗಪ್ಪ ಚೌಕಿ ನಿವಾಸಿ ಹಾಗೂ ಇಲ್ಲಿನ ಅಲ್ಪಸಂಖ್ಯಾತ ಇಲಾಖೆ ಕಚೇರಿಯ ಅಟೆಂಡರ್ ಆಲಂ ಭಾಷಾ (20) ಬಂಧಿತ ಯುವಕ ಎಂದು ತಿಳಿದು ಬಂದಿದೆ.
ಈತ ತನ್ನ ವಾಟ್ಸಾಪ್‌ನಲ್ಲಿ ಫೆಲೆಸ್ತೀನ್ ಪರವಾಗಿ ಸ್ಟೇಟಸ್ ಹಾಕಿಕೊಂಡಿದ್ದ ಹಾಗೂ ಮೊಬೈಲ್‌ನಲ್ಲಿ ಫೆಲೆಸ್ತೀನ್ ದೇಶದ ಜನರಿಗೆ ಬೆಂಬಲ ನೀಡುವಂತಹ ವೀಡಿಯೊ ಇಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ʼಆರೋಪಿಯ ವಿರುದ್ಧ ಸ್ವಯಂ ಪ್ರೇರಣೆಯಿಂದ ಸಿಆರ್‌ಪಿಸಿ 108–151 ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತಹಶೀಲ್ದಾರ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ ಗೆ ಬೆಂಬಲ ಸೂಚಿಸಿರುವಾಗ, ಫೆಲೆಸ್ತೀನ್ ಪರವಾಗಿ ಪೋಸ್ಟ್ ಹಾಕುವುದು ರಾಜದ್ರೋಹದ ಕೃತ್ಯʼʼ ಎಂದು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ ಐ ಪ್ರತಿಕ್ರಿಯಿಸಿದರು.