HSRP ನಂಬರ್ ಪ್ಲೇಟ್ ಕಡ್ಡಾಯ ಅಳವಡಿಕೆ: ಗಡುವು ವಿಸ್ತರಣೆ ಮಾಡಿದ ರಾಜ್ಯ ಸರಕಾರ

Update: 2023-11-14 09:29 GMT

ಬೆಂಗಳೂರು, ನ.14: ಅತಿ ಸುರಕ್ಷಿತ ನೋಂದಣಿ ಫಲಕ (ಎಚ್.ಎಸ್.ಆರ್.ಪಿ) ಅಳವಡಿಕೆಗೆ ನೀಡಲಾಗಿದ್ದ ಗಡುವನ್ನು ಮೂರು ತಿಂಗಳ ಕಾಲ ರಾಜ್ಯ ಸರಕಾರ ವಿಸ್ತರಣೆ ಮಾಡಿದೆ. 

2019ರ ಎಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾಗಿರುವ ವಾಹನಗಳ ಮಾಲಕರಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್.ಎಸ್.ಆರ್.ಪಿ) ಅಳವಡಿಕೆಗೆ ನೀಡಲಾಗಿದ್ದ ಗಡುವನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಿದ್ದು, ವಾಹನ ಸವಾರರು ತರಾತುರಿಯಿಲ್ಲದೆ ಎಚ್.ಎಸ್.ಆರ್.ಪಿ ಅಳವಡಿಸಿಕೊಳ್ಳಬಹುದಾಗಿದೆ.

ನವೆಂಬರ್ 17 ಕ್ಕೆ ಅಂತಿಮ ಗಡುವು ಇದ್ದರೂ, ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಕೆ ಕಾರ್ಯ ನಡೆಯದಿರುವುದರಿಂದಾಗಿ ವಾಹನ ಮಾಲಕರನ್ನು ದೃಷ್ಟಿಯಲ್ಲಿರಿಸಿಕೊಂಡು ಮತ್ತೊಂದು ಅವಕಾಶ ನೀಡಬೇಕು ಎನ್ನುವ ನಿರ್ಧಾರಕ್ಕೆ ಸಾರಿಗೆ ಇಲಾಖೆ ಬಂದಿದೆ. ಹಾಗಾಗಿ ನವೆಂಬರ್ 17ಕ್ಕೆ ಬದಲಾಗಿ 2024ರ ಫೆಬ್ರವರಿ 17ಕ್ಕೆ ಅಂತಿಮ ದಿನಾಂಕ ಬದಲಾವಣೆ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News