ಬೇಕಾದರೆ ಸಚಿವ ಸ್ಥಾನ ಬಿಟ್ಟುಕೊಡುತ್ತೇನೆ: ಕೆ.ಎಚ್.ಮುನಿಯಪ್ಪ ಹೇಳಿದ್ದೇನು?

Update: 2023-08-16 14:46 GMT

ಬೆಂಗಳೂರು, ಆ.16: ʼʼಎರಡೂವರೆ ವರ್ಷ ಆದ ಮೇಲೆ ಹಿರಿಯರು ಮಂತ್ರಿ ಸ್ಥಾನ ಬಿಡಬೇಕುʼʼ ಎಂದು ಕೆಪಿಸಿಸಿ ಸದಸ್ಯರ ಸಭೆಯಲ್ಲಿ ನೀಡಿದ್ದ ತಮ್ಮ ಹೇಳಿಕೆ ಬಗ್ಗೆ ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ. 

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ʼʼಇದು ನಮ್ಮ ಮನೆ ವಿಚಾರ. ನಾವು ಮಾತಾಡಿದ್ದೇವೆ. ಇದು ನನ್ನ ವೈಯಕ್ತಿಕ ವಿಚಾರ. ರಾಜಕೀಯವಾಗಿ ಪಕ್ಷ ಬಲಪಡಿಸಬೇಕಾದರೆ ಎಲ್ಲರಿಗೂ ಅವಕಾಶ ಕೊಡಬೇಕು. ನಾನು ಬೇಕಾದರೆ ಸಚಿವ ಸ್ಥಾನ ಬಿಟ್ಟುಕೊಡುತ್ತೇನೆ ನನಗೇನು ಅಭ್ಯಂತರ ಇಲ್ಲʼʼ ಎಂದು ಹೇಳಿದ್ದಾರೆ. 

ʼʼಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಹೈಕಮಾಂಡ್​​ ತೀರ್ಮಾನ ಮಾಡಿದರೆ ನೋಡೋಣ. ಆದರೆ ಯುವಕರಿಗೆ ಅವಕಾಶ ಸಿಗಲಿ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯʼʼ ಎಂದು ಸಚಿವ ಮುನಿಯಪ್ಪ ಅವರು ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ ಅಕ್ಕಿ ಬದಲಾಗಿ ಆಗಸ್ಟ್ ತಿಂಗಳಿನ ಡಿಬಿಟಿ (ನೇರ ನಗದು ವರ್ಗಾವಣೆ) ಹಣ ಒಂದು ವಾರದಲ್ಲಿ ಫಲಾನುಭವಿಗಳ ಖಾತೆಗೆ ಸೇರಲಿದೆ ಎಂದು ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ʼʼಅಕ್ಕಿಯನ್ನು ಪ್ರತಿ ತಿಂಗಳು 10 ಅಥವಾ 11ನೇ ತಾರೀಖು ಕೊಡುತ್ತಿದ್ದೆವು. ಆದರೆ, ಡಿಬಿಟಿ ತಡವಾಗುತ್ತಿದ್ದು, ಇದಕ್ಕೆ ತಾಂತ್ರಿಕ ಕಾರಣವೂ ಇದೆ. ಹೀಗಾಗಿ ಶೀಘ್ರದಲ್ಲಿಯೇ ಫಲಾನುಭವಿಗಳಿಗೆ ಹಣ ಜಮೆ ಮಾಡಲಾಗುವುದುʼʼ ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News