ರಾಜ್ಯದಲ್ಲಿ ವಾಣಿಜ್ಯ ಬಳಕೆಯ ವಾಹನಗಳ ತೆರಿಗೆ ಹೆಚ್ಚಳ; ವಿವರ ಇಲ್ಲಿದೆ...

Update: 2023-07-25 05:09 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಬಜೆಟ್‍ನಲ್ಲಿ ಉಲ್ಲೇಖಿಸಿರುವಂತೆ ಸರಕು ವಾಹನಗಳಿಗೆ ಪೂರ್ಣಾವಧಿ ತೆರಿಗೆ ಪರಿಷ್ಕರಣೆ ಸೋಮವಾರದಿಂದಲೇ ಜಾರಿಯಾಗಿದೆ. 

ಬಜೆಟ್‍ನಲ್ಲಿ ಉಲ್ಲೇಖಿಸಿರುವಂತೆ ‘ಸರಕು ವಾಹನಗಳಿಗೆ ಪೂರ್ಣಾವಧಿ ತೆರಿಗೆ ಪರಿಷ್ಕರಿಸುವ 2023ನೆ ಸಾಲಿನ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕ’ಕ್ಕೆ ಜು.20ರಂದು ವಿಧಾನಮಂಡಲ ಒಪ್ಪಿಗೆ ಪಡೆಯಲಾಗಿತ್ತು. 

ಸರಕು ಸಾಗಾಣಿಕೆ, ಶಾಲಾಕಾಲೇಜು ವಿದ್ಯಾರ್ಥಿಗಳ ವಾಹನಗಳು ತೆರಿಗೆ ವ್ಯಾಪ್ತಿಗೆ ಒಳಪಡುತ್ತಿವೆ. ಸಂಚಾರಿ ಕ್ಯಾಂಟೀನ್, ಸಂಚಾರಿ ಗ್ರಂಥಾಲಯ, ಎಟಿಎಂಗೆ ಹಣ ಭರ್ತಿ ಮಾಡುವ ವಾಹನಗಳು, ಸಂಚಾರಿ ಕ್ಲಿನಿಕ್‍ಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. 

 ತೆರಿಗೆ ಹೆಚ್ಚಳ ವಿವರ ಹೀಗಿದೆ...

ಹೊಸ ವಾಹನಗಳ ನೋಂದಣಿ ಸಮಯದಲ್ಲಿ ಸರಕು ವಾಹನಗಳ ಒಟ್ಟಾರೆ ತೂಕವು 1500-2000 ಕಿ.ಗ್ರಾಂ.ಮೀರದಿದ್ದರೆ ಅವುಗಳಿಗೆ 20 ಸಾವಿರ ರೂ.(ಈ ಹಿಂದೆ 10 ಸಾವಿರ ರೂ.ಇತ್ತು)

2000 ಕಿ.ಗ್ರಾಂ.ನಿಂದ 3000 ಕಿ.ಗ್ರಾಂ.ಮೀರದಿದ್ದರೆ 30 ಸಾವಿರ ರೂ.(ಈ ಹಿಂದೆ 15 ಸಾವಿರ ರೂ.ಇತ್ತು)

3000 ಕಿ.ಗ್ರಾಂ.ನಿಂದ 5500 ಕಿ.ಗ್ರಾಂ.ಮೀರದಿದ್ದರೆ 40 ಸಾವಿರ ರೂ.(ಈ ಹಿಂದೆ 20 ಸಾವಿರ ರೂ.ಇತ್ತು)ಪೂರ್ಣಾವಧಿ ತೆರಿಗೆ ಪಾವತಿಸಬೇಕು.

500 ಕಿ.ಗ್ರಾಂ.ನಿಂದ 7500 ಕಿ.ಗ್ರಾಂ.ಮೀರದಿದ್ದರೆ 60 ಸಾವಿರ ರೂ. 

7500 ಕಿ.ಗ್ರಾಂ.ನಿಂದ 9500 ಕಿ.ಗ್ರಾಂ.ಮೀರದಿದ್ದರೆ 80 ಸಾವಿರ ರೂ.

9500 ಕಿ.ಗ್ರಾಂ.ನಿಂದ 12 ಸಾವಿರ ಕಿ.ಗ್ರಾಂ.ಮೀರದಿದ್ದರೆ ಒಂದು ಲಕ್ಷ ರೂ. ಪೂರ್ಣಾವಧಿ ತೆರಿಗೆ ಪಾವತಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News