ದಲಿತ ಸಂಘಟನೆಗಳ ಮುಖಂಡರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವಂತೆ ಒತ್ತಾಯ

Update: 2023-08-05 18:01 GMT

ಬೆಂಗಳೂರು, ಆ.5: ಕಾಂಗ್ರೆಸ್ ಸರಕಾರಕ್ಕೆ ಅಧಿಕಾರಕ್ಕೆ ಬರುಲು ದಲಿತ ಸಂಘಟನೆಗಳು ಮತ್ತು ಮುಖಂಡರು ಶ್ರಮಿಸಿದ್ದು, ದಲಿತ ಮುಖಂಡರನ್ನು ವಿಧಾನ ಪರಿಷತ್ತಿಗೆ ನೇಮಕ ಮಾಡಬೇಕು ಎಂದು ಬೀಮ್ ಆರ್ಮಿಯ ರಾಜ್ಯಾಧ್ಯಕ್ಷ ರಾಜ್‍ಗೋಪಾಲ್ ಡಿ.ಎಸ್. ಒತ್ತಾಯಿಸಿದ್ದಾರೆ.

ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರವು ದಲಿತ ಹೋರಾಟಗಾರರನ್ನು ಪರಿಗಣಿಸದೆ, ನಿವೃತ್ತ ಐಆರ್‍ಎಸ್ ಅಧಿಕಾರಿಯನ್ನು ವಿಧಾನ ಪರಿಷತ್ತಿನ ಸದಸ್ಯತ್ವಕ್ಕೆ ನೇಮಿಸಲಾಗುತ್ತಿದೆ. ಇದು ದಲಿತ ಮುಖಂಡರಲ್ಲಿ ಬೇಸರ ತರಿಸಿದೆ ಎಂದರು.

ಆದುದರಿಂದ ಈ ಕೂಡಲೇ ನಿವೃತ್ತ ಅಧಿಕಾರಿಯ ಹೆಸರನ್ನು ವಿಧಾನ ಪರಿಷತ್ತಿಗೆ ನೇಮಕ ಮಾಡುವ ಪಟ್ಟಿಯಿಂದ ಕೈ ಬಿಡಬೇಕು. ಯಾವುದೇ ದಲಿತ ಮುಂಖರ ಹೆಸರನ್ನು ಪಟ್ಟಿಗೆ ಸೇರಿಸಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಮುಂಚೆ ಎಲ್ಲಿಯೂ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂದು ಹೇಳಿಲ್ಲ. ಆದರೆ ಈಗ ಏಕಾಏಕಿ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆಗಳ ಹಣದಲ್ಲಿ 11 ಸಾವಿರ ರೂ.ಗಳನ್ನು ಬಳಕೆ ಮಾಡಿಕೊಳ್ಳಲು ತೀರ್ಮಾನಿಸಿದೆ. ಈ ತೀರ್ಮಾನವನ್ನು ಕೈ ಬಿಟ್ಟು ಹಣವನ್ನು ದಲಿತರ ಅಭಿವೃದ್ಧಿ ಯೋಜನೆಗಳೀಗೆ ಬಳಕೆ ಮಾಡಬೇಕು ಎಂದು ಒತ್ತಾಯಿಸಿದರು.

ಚಿತ್ರದುರ್ಗದ ಕಾವಾಡಿಗ ಹಟ್ಟಿಯಲ್ಲಿ ಪಾಲಿಕೆಯ ಕಲುಷಿತ ನೀರನ್ನು ಸೇವಿಸಿ, ಎಸ್‍ಸಿ ಕಾಲನಿಯಲ್ಲಿ ಮೃತಪಟ್ಟ 5 ಜನರ ಕುಟುಂಬಗಳೀಗೆ ತಲಾ 25ಲಕ್ಷ ರೂ.ಹಾಗೂ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವ 150 ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News