ಆರೆಸ್ಸೆಸ್ ಅಂಗಸಂಸ್ಥೆಗೆ 35 ಎಕರೆ ಗೋಮಾಳ: ರಾಜ್ಯ ಸರಕಾರ ತಡೆ
ಬೆಂಗಳೂರು, ಜು. ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ(ಆರೆಸ್ಸೆಸ್)ಗೆ ಸೇರಿದ ‘ಜನಸೇವಾ ಟ್ರಸ್ಟ್’ಗೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದ ತಾವರೆಕೆರೆ ಹೋಬಳಿಯಲ್ಲಿ ಬಿಜೆಪಿ ಸರಕಾರ 35.33 ಎಕರೆ ಗೋಮಾಳ ಭೂಮಿ ಮಂಜೂರು ಮಾಡಿದ್ದನ್ನು ಕಾಂಗ್ರೆಸ್ ಸರಕಾರ ತಡೆಹಿಡಿದಿದೆ.
2022ರ ಸೆಪ್ಟೆಂಬರ್‍ನಲ್ಲಿ ಗೋಮಾಳ ಭೂಮಿಯನ್ನು ಬಿಜೆಪಿ ಸರಕಾರ, ಜನಸೇವಾ ಟ್ರಸ್ಟ್‍ಗೆ ಭೂಮಿ ಮಂಜೂರು ಮಾಡಿತ್ತ್ತು. 2023ರ ಮೇ 22ರಂದು ಜಿಲ್ಲಾಧಿಕಾರಿ ಮಂಜೂರು ಆದೇಶವನ್ನೂ ಹೊರಡಿಸಿದ್ದರು. ಗೋಮಾಳವನ್ನು ಜಾನುವಾರುಗಳ ಮೇವಿಗಾಗಿ ಸರಕಾರ ಮೀಸಲಿಟ್ಟದ್ದ ಭೂಮಿ ಇದಾಗಿದೆ ಎಂದು ತಿಳಿಸಲಾಗಿದೆ.
ಯವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಜನಸೇವಾ ಟ್ರಸ್ಟ್‍ಗೆ 35.33 ಎಕರೆ ಸರಕಾರಿ ಭೂಮಿಯನ್ನು ಮಂಜೂರು ಮಾಡಿದ್ದು, ಸಿಎಂ ಸೂಚನೆ ಹಿನ್ನೆಲೆಯಲ್ಲಿ ಅದನ್ನು ತಡೆಹಿಡಿಯಲಾಗಿದೆ ಎಂದು ಸ್ಪಷ್ಟಣೆ ನೀಡಿದ್ದಾರೆ.
‘ಚುನಾವಣೆಗೆ ಕೆಲವೇ ತಿಂಗಳು ಮೊದಲು ತರಾತುರಿಯಲ್ಲಿ ಸರಕಾರಿ ಭೂಮಿಯನ್ನು ಜನಸೇವಾ ಟ್ರಸ್ಟ್ ಸಹಿತ ವಿವಿಧ ಸಂಸ್ಥೆಗಳಿಗೆ ಹಿಂದಿನ ಬಿಜೆಪಿ ಸರಕಾರ ಮಂಜೂರು ಮಾಡಿದೆ. ಈ ಕುರಿತು ಯಾವ ಉದ್ದೇಶಕ್ಕಾಗಿ ಸಂಸ್ಥೆಗಳು ಭೂಮಿ ಮಂಜೂರು ಮಾಡಿಸಿಕೊಂಡಿವೆ ಎಂಬುದನ್ನು ಪರಿಶೀಲಿಸಲು ತಡೆಹಿಡಿಯಲಾಗಿದೆ’
ಇದನ್ನೂ ಓದಿ: ಸರಕಾರಿ ಗೋಮಾಳದ 35 ಎಕರೆ ಜಮೀನು ಆರೆಸ್ಸೆಸ್ ಅಂಗಸಂಸ್ಥೆಗೆ ಮಂಜೂರು: ಸರಕಾರದ ಅನುಮೋದನೆ