ಕೋಲಾರ: ಬೈಕ್, ಟಾಟಾ ಏಸ್, ಆಟೋ ನಡುವೆ ಸರಣಿ ಅಪಘಾತ; ಮೂವರು ಗಂಭೀರ

Update: 2023-11-14 08:02 GMT

ಕೋಲಾರ:  ಬೈಕ್, ಟಾಟಾ ಏಸ್ ವಾಹನ, ಆಟೋ ನಡುವೆ ಸರಣಿ ಅಪಘಾತವುಂಟಾದ ಘಟನೆ ತಾಲೂಕಿನ ಕೆಂದಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.

ಘಟನೆಯಲ್ಲಿ ನಾಲ್ಕು ಮಕ್ಕಳು ಸೇರಿದಂತೆ 17 ಜನರಿಗೆ ಗಾಯಗಳಾಗಿವೆ. ಮೂವರ ಪರಿಸ್ಥಿತಿ ಗಂಭೀರವಾಗಿದೆ.  ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಆಂಧ್ರದ ಬಾಯಿಕೊಂಡ ಗಂಗಮ್ಮ ದೇಗುಲಕ್ಕೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News