ಕಿರ್ಗಿಝ್‍ಸ್ತಾನ್: ಪವರ್‌ ಲಿಫ್ಟಿಂಗ್ ವಿಶ್ವಕಪ್ ನಲ್ಲಿ ಕರ್ನಾಟಕಕ್ಕೆ 13 ಪದಕ

Update: 2023-11-30 17:35 GMT

ಬೆಂಗಳೂರು: ಕಿರ್ಗಿಝ್‍ಸ್ತಾನದಲ್ಲಿ ನ.17 ರಿಂದ 19ರವರೆಗೆ ಜರುಗಿದ ಅಂತರ್‍ರಾಷ್ಟ್ರೀಯ ಮಟ್ಟದ ಎಡಬ್ಲ್ಯುಪಿಸಿ ಹಾಗೂ ಡಬ್ಲ್ಯುಪಿಸಿ ಪವರ್‌ ಲಿಫ್ಟಿಂಗ್(ಭಾರ ಎತ್ತುವ) ವಿಶ್ವಕಪ್ ಪಂದ್ಯಾವಳಿಯಲ್ಲಿ ಮುಹಮ್ಮದ್ ಅಝ್ಮತ್ ನೇತೃತ್ವದ ಕರ್ನಾಟಕದ ತಂಡವು ವಿವಿಧ ವಿಭಾಗಗಳಲ್ಲಿ 11 ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.

75 ಕೆಜಿ ಒಳಗಿನ ಜೂನಿಯರ್ ವಿಭಾಗದಲ್ಲಿ ಅಖಿಲ್ ಅಹ್ಮದ್(ಎರಡು ಚಿನ್ನದ ಪದಕ), 100 ಕೆಜಿ ಒಳಗಿನ ಮಾಸ್ಟರ್ 2 ವಿಭಾಗದಲ್ಲಿ ಮುಹಮ್ಮದ್ ಅಝ್ಮತ್(ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚು), 82.5 ಕೆಜಿ ಒಳಗಿನ ವಿಭಾಗದಲ್ಲಿ ಹಿಮಾಂಶುಪಾಂಡೆ(ಮೂರು ಚಿನ್ನ) ಹಾಗೂ ಟೀನ್-1 ವಿಭಾಗದಲ್ಲಿ ಸೂರಿಯಾ ಕಿನಿ ನಾಲ್ಕು ಚಿನ್ನದ ಪದಕಗಳನ್ನು ಗೆದಿದ್ದಾರೆ.

ಈ ಅಂತರ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಒಟ್ಟು 400 ಮಂದಿ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಭಾರತವನ್ನು ಪ್ರತಿನಿಧಿಸಿದ್ದ 24 ಮಂದಿ ಪೈಕಿ ಕರ್ನಾಟಕದ ಐವರು ಕ್ರೀಡಾಪಟುಗಳು ಭಾಗವಹಿಸಿದ್ದರು ಎಂದು ತರಬೇತುದಾರ ಮುಹಮ್ಮದ್ ಅಝ್ಮತ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ಕ್ರಿಕೆಟ್, ಹಾಕಿ ಹೊರತುಪಡಿಸಿ ಬೇರೆ ಕ್ರೀಡೆಗಳಿಗೆ ಅಷ್ಟು ಪ್ರೋತ್ಸಾಹ ಸಿಗುತ್ತಿಲ್ಲ. ಪ್ರತಿಯೊಂದು ಗ್ರಾಮ, ತಾಲೂಕಿನಲ್ಲೂ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದ ಕ್ರೀಡಾಪಟುಗಳು ಸಿಗುತ್ತಾರೆ. ಅವರನ್ನು ಗುರುತಿಸಿ ಪ್ರೋತ್ಸಾಹ ನೀಡಿದರೆ ಕ್ರೀಡಾ ಕ್ಷೇತ್ರದಲ್ಲಿ ಭಾರತ ಮತ್ತಷ್ಟು ಎತ್ತರಕ್ಕೆ ಏರಬಹುದು ಎಂದರು.

ಚಿನ್ನದ ಪದಕ ವಿಜೇತ ಅಖಿಲ್ ಅಹ್ಮದ್ ಮಾತನಾಡಿ, ಈ ಹಿಂದೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದೆ. ಇದೇ ಮೊದಲ ಬಾರಿಗೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಜ್ಯದ ಮೂಲಕ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತ್ತು. ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದೇನೆ. ಮುಂದಿನ ವರ್ಷ ಮತ್ತಷ್ಟು ಉತ್ತಮ ಪ್ರದರ್ಶನ ತೋರಲು ಪರಿಶ್ರಮ ಪಡುತ್ತೇನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News