ಕೋವಿಡ್ ಅಕ್ರಮಗಳ ಕುರಿತು ನ್ಯಾ.ಕುನ್ಹಾ ಶಿಫಾರಸು ಆಧರಿಸಿ ಕಾನೂನು ಕ್ರಮ : ದಿನೇಶ್ ಗುಂಡೂರಾವ್

Update: 2024-12-09 14:56 GMT

ಬೆಳಗಾವಿ : ಕೋವಿಡ್-19 ರ ಸಂದರ್ಭದಲ್ಲಿ ತಾಲೂಕು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಆಕ್ಸಿಜನ್ ಪ್ಲಾಂಟ್ ಆಸ್ಪತ್ರೆಗಳ ಅಳವಡಿಕೆಯಲ್ಲಿ ಅಕ್ರಮ ನಡೆದಿರುವ ಕುರಿತು ನ್ಯಾ.ಕುನ್ಹಾ ಆಯೋಗದ ವರದಿಯ ಶಿಫಾರಸ್ಸಿನಂತೆ ಸರಕಾರ ಕಾನೂನು ಕ್ರಮ ಜರುಗಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಾನೂನು ಆರಂಭಿಸಿದ್ದಾರೆ.

ಸೋಮವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಾಲೂಕು ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಇದುವರೆಗೂ 243 ಆಕ್ಸಿಜನ್ ಪ್ಲಾಂಟ್‌ಗಳನ್ನು ಅಳವಡಿಸಲಾಗಿದೆ. ಪಿ.ಎಂ.ಕೆರ್ 50, ಎಂಒಪಿಎನ್‌ಜಿ 51, ರಾಜ್ಯ ನಿರ್ವಹಣೆ 40, ಪಿಎಸ್‌ಆರ್ 110, ಜಿಲ್ಲಾ ನಿರ್ವಹಣೆ 1, ಮಂಡಳಿ 3, ಕಲಿದೆಲ್ಲು ಇಲಾಖೆ 6, ವಿದೇಶಿ ನಿರ್ವಹಣೆ 2 ಸೇರಿದಂತೆ 243 ಆಕ್ಸಿ ಪ್ಲಾಂಟ್‌ಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ.

ಕೋವಿಡ್‌ಗೂ ಮೊದಲು ರಾಜ್ಯದಲ್ಲಿ ಯಾವುದೇ ಸಿಎಫ್‌ಎ ಆಕ್ಸಿಜನ್ ಪ್ಲಾಂಟ್‌ಗಳು ಇಲ್ಲ. ಆಕ್ಸಿಜನ್ ಸಿಲಿಂಡರ್ ಮೂಲಕ ವೇದಿಕೆಗೆ ಸರಿಯಾಗಿ ಪೂರೈಕೆ ಮಾಡಲು ಸಾಧ್ಯವಿಲ್ಲ. ಕೋವಿಡ್ ಅಲೆ ಸಂದರ್ಭದಲ್ಲಿ 243 ಆಕ್ಸಿಜನ್ ಪ್ಲಾಂಟ್‌ಗಳನ್ನು ಅಳವಡಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್‌ಗೆ ಅತಿಹೆಚ್ಚು ಬೇಡಿಕೆ ಇತ್ತು. ಪ್ರಸ್ತುತ ದಿನಗಳಲ್ಲಿ ಆಕ್ಸಿಜನ್‌ಗೆ ಹೆಚ್ಚಿನ ಬೇಡಿಕೆ ಇಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಕೋವಿಡ್ ವೇಳೆ ವೈದ್ಯಕೀಯ ಉಪಕರಣಗಳ ಖರೀದಿ ವೇಳೆ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಕೇಳಿ ಬಂದಿತ್ತು. ಹೀಗಾಗಿ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗಿದೆ. ಸರಕಾರಕ್ಕೆ ಆಯೋಗದ ವರದಿಯನ್ನು ಸಲ್ಲಿಸಿದ್ದು, ಮೇಲ್ನೋಟಕ್ಕೆ ಸಾಕಷ್ಟು ಲೋಪದೋಷಗಳು ನಡೆದಿವೆ. ಆಯೋಗದ ಶಿಫಾರಸ್ಸಿನಂತೆ ಸರಕಾರ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಿದೆ ಎಂದು ದಿನೇಶ್ ಗುಂಡೂರಾವ್ ಪ್ರಕಟಿಸಿದರು.

ಈ ವೇಳೆ ಸದಸ್ಯ ಡಾ.ಯತೀಂದ್ರ, ಕೊಡಗು, ಮೈಸೂರು ಸೇರಿದಂತೆ ಕೆಲವು ಜಿಲ್ಲೆಗಳಿಗೆ ಆಕ್ಸಿಜನ್ ಪೂರೈಕೆಯನ್ನೇ ಮಾಡಿಲ್ಲ. ಪೂರೈಸಿದ ಕಡೆ ಉಪಯೋಗವಾಗಿಲ್ಲ. ಸಾಕಷ್ಟು ಅವ್ಯವಹಾರ ನಡೆದಿದೆ. ಈ ಬಗ್ಗೆ ಸರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News