ಮುರುಘಾ ಮಠದ ಶರಣರ ಹಗರಣಗಳ ಕುರಿತು ಸಮಗ್ರ ತನಿಖೆ ನಡೆಯಲಿ: ಎಚ್. ವಿಶ್ವನಾಥ್

Update: 2023-11-25 17:50 GMT

ಬೆಂಗಳೂರು: ಲೈಂಗಿಕ ಶೋಷಣೆ, ಅರಣ್ಯ ಕಾಯಿದೆ ಉಲ್ಲಂಘನೆ, ದತ್ತು ಪ್ರಕ್ರಿಯೆಗಳ ದುರುಪಯೋಗ ಸೇರಿದಂತೆ ಎರಡು ದಶಕಗಳಿಂದ ಮುರುಘಾ ಮಠದ ಶರಣರಿಂದ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಯಬೇಕು ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಆಗ್ರಸಿದ್ದಾರೆ.

ಶನಿವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೋಕ್ಸೋ ಕಾಯ್ದೆಯ ಆಶಯಗಳೇ ಇವತ್ತು ಮಣ್ಣುಪಾಲಾಗುತ್ತಿದ್ದು, ಈ ಪ್ರಕರಣದಲ್ಲಿ ಬಂಧನವಾದ ವ್ಯಕ್ತಿಗೆ ಜಾಮೀನು ಸಿಗುವುದಿಲ್ಲ. ಆದರೆ ಕಾಯ್ದೆಯಡಿ ಜೈಲು ಪಾಲಾಗಿದ್ದ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ ಎಂದು ಖಂಡಿಸಿದರು.

ಬಸವನನಾಡಿನಲ್ಲಿ ಈಗ ಏನಾಗುತ್ತಿದೆ ಎಂಬುವುದು ತಿಳಿಯುತ್ತಿಲ್ಲ. ಈ ಹಿಂದೆ ಮುರುಘಾಶ್ರೀಗಳು ನಾನೇ ಬಸವಣ್ಣ ಎನ್ನುತ್ತಿದ್ದರು. ಕೆಳ ಜಾತಿಯ ಮಕ್ಕಳು ಬಲಿಯಾಗುತ್ತಿದ್ದಾರೆ. ಮೇಲ್ಜಾತಿಯ ಹೆಣ್ಣುಮಕ್ಕಳಿಗೆ ಜಮೀನು, ಹಣ ನೀಡಿ ಸುಮ್ಮನಾಗಿಸುವ ಕೆಲಸ ನಡೆಯುತ್ತಿದೆ ಎಂದು ದೂರಿದ ಅವರು, ಜೈಲು ಸೇರಿ ಹೊರಬಂದ ಸ್ವಾಮೀಜಿಗೂ ಜನರು ಪಾದ ಪೂಜೆ ಮಾಡುತ್ತಾರೆ. ಏನೂ ಅರಿಯದ ಮಕ್ಕಳನ್ನು ಅನ್ನ, ಅಕ್ಷರದ ಹೆಸರಿನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಬಳಕೆ ಮಾಡುತ್ತಾರೆ ಎಂದಾದರೇ ಇದೊಂದು ನಾಚಿಕೆಗೇಡಿನ ಸಂಗತಿ. ಹೀಗಾಗಿಯೇ ಮಠಗಳು ನಂಬಿಕೆಗಳನ್ನು ಕಳೆದುಕೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News