ಲೋಕಸಭಾ ಚುನಾವಣೆ : 3 ಗಂಟೆ ವೇಳೆಗೆ ರಾಜ್ಯದಲ್ಲಿ 50.93 ಶೇ. ಮತದಾನ
Update: 2024-04-26 10:26 GMT
ಬೆಂಗಳೂರು: ಎರಡನೇ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿರುವ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆ 50.93 ಶೇ. ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟನೆ ತಿಳಿಸಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 57.49 ಶೇ. ಮತದಾನವಾಗಿದ್ದರೆ, ಹಾಸನ 55.92 ಶೇ., ದಕ್ಷಿಣ ಕನ್ನಡ 58.76 ಶೇ., ಚಿತ್ರದುರ್ಗ- 52.14 ಶೇ., ತುಮಕೂರು 56.62 ಶೇ., ಮಂಡ್ಯ 57.44 ಶೇ., ಮೈಸೂರು 53.55, ಚಾಮರಾಜನಗರ- 54.82 ಶೇ., ಬೆಂಗಳೂರು ಗ್ರಾಮಾಂತರ-49.62 ಶೇ., ಬೆಂಗಳೂರು ಉತ್ತರ-41.12, ಬೆಂಗಳೂರು ಸೆಂಟ್ರಲ್-40.10 ಶೇ., ಬೆಂಗಳೂರು ದಕ್ಷಿಣ-40.77 ಶೇ., ಚಿಕ್ಕಬಳ್ಳಾಪುರ 55.90 ಶೇ. ಹಾಗೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 54.66 ಶೇ. ಮತದಾನವಾಗಿದೆ.