ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ | ನಾಲ್ಕು ಸರಕಾರಿ ಅಧಿಕಾರಿಗಳ ಬಳಿ 26.66 ಕೋಟಿ ಸಂಪತ್ತು..!

Update: 2024-11-21 16:08 GMT

ಬೆಂಗಳೂರು : ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪ ಬೆನ್ನಲ್ಲೇ ನಾಲ್ವರು ಸರಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ 26.66 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಪತ್ತೆೆ ಹಚ್ಚಿದ್ದಾರೆ.

ಗುರುವಾರ ಬೆಳ್ಳಂ ಬೆಳಗ್ಗೆೆ ಲೋಕಾಯುಕ್ತ ಪೊಲೀಸರು ನಾಲ್ವರು ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 22 ಸ್ಥಳಗಳಲ್ಲಿ ಏಕ ಕಾಲಕ್ಕೆೆ ಶೋಧನಾ ಕಾರ್ಯ ಕೈಗೊಂಡರು.

ಆ ವೇಳೆ ಕೆಜಿಗಟ್ಟಲೆ ಚಿನ್ನ, ಆಸ್ತಿ-ಪಾಸ್ತಿ, ಕಂತೆ ಕಂತೆ ನೋಟುಗಳು ಸೇರಿದಂತೆ ಕೋಟ್ಯಂತರ ರೂ. ಮೌಲ್ಯದ  ಆಸ್ತಿಗಳು ಪತ್ತೆೆಯಾಗಿವೆ ಎಂದು ತಿಳಿದು ಬಂದಿದೆ.

ಅಧಿಕಾರಿ-ಹೊಂದಿರುವ ಆಸ್ತಿ-ಪಾಸ್ತಿ ವಿವರ:

► ಕೃಷ್ಣವೇಣಿ ಎಂ.ಸಿ, ಹಿರಿಯ ಭೂ ವಿಜ್ಞಾನಿ, ಮಂಗಳೂರು. (11.93 ಕೋಟಿ ರೂ.).

5 ಸ್ಥಳಗಳಲ್ಲಿ ಶೋಧನಾ ಕಾರ್ಯ. 3 ನಿವೇಶನಗಳು, ಬೆಂಗಳೂರಿನ ಯಲಹಂಕದಲ್ಲಿ 1 ಫ್ಲಾಟ್, ನಿರ್ಮಾಣ ಹಂತದಲ್ಲಿರುವ 1 ವಾಣಿಜ್ಯ ಸಂಕೀರ್ಣ, 26 ಎಕರೆ ಕೃಷಿ ಜಮೀನು (ಕಾಫಿ ಪ್ಲಾಂಟೇಷನ್) ಸೇರಿ ಒಟ್ಟು 10,41,38,286 ರೂ. ಮೌಲ್ಯದ ಸ್ಥಿರ ಆಸ್ತಿ.

56,450 ರೂ. ನಗದು, 66,71,445 ರೂ. ಬೆಲೆ ಬಾಳುವ ಚಿನ್ನಾಭರಣಗಳು, 60 ಲಕ್ಷ ರೂ. ಬೆಲೆಬಾಳುವ ವಾಹನಗಳು, 24.40 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು 1,51,67,895 ರೂ. ಮೌಲ್ಯದ ಚರ ಆಸ್ತಿ.

► ತಿಪ್ಪೇಸ್ವಾಮಿ ಎನ್.ಕೆ, ನಿರ್ದೇಶಕರು, ನಗರ ಯೋಜನೆ, ಬೆಂಗಳೂರು. (3.46 ಕೊಟಿ ರೂ.)

5 ಸ್ಥಳಗಳಲ್ಲಿ ಶೋಧನಾ ಕಾರ್ಯ. 1 ನಿವೇಶನ, 2 ವಾಸದ ಮನೆಗಳು, 7-5 ಎಕರೆ ಕೃಷಿ ಜಮೀನು, ಎಲ್ಲ ಸೇರಿ 2,50,88,000 ರೂ.

ಅದೇ ರೀತಿ, 8 ಲಕ್ಷ ರೂ. ನಗದು, 58,73,632 ರೂ. ಬೆಲೆ ಬಾಳುವ ಚಿನ್ನಾಭರಣಗಳು, 29.10 ಲಕ್ಷ ರೂ. ಬೆಲೆ ಬಾಳುವ ವಾಹನಗಳು, 15 ಸಾವಿರ ರೂ. ಬೆಲೆಬಾಳುವ ಇತರೆ ವಸ್ತುಗಳು ಸೇರಿ 87,98,632 ರೂ. ಚರ ಆಸ್ತಿ.

► ಮೋಹನ್. ಕೆ, ಅಬಕಾರಿ ಅಧೀಕ್ಷಕರು, ಅಬಕಾರಿ ಜಂಟಿ ಆಯುಕ್ತರ ಕಛೇರಿ, ಬೆಂಗಳೂರು ದಕ್ಷಿಣ, ಬೆಂಗಳೂರು. (4,37,84,098 ರೂ.).

5 ಸ್ಥಳಗಳಲ್ಲಿ ಶೋಧನಾ ಕಾರ್ಯ. 3 ನಿವೇಶನಗಳು, 2 ವಾಸದ ಮನೆಗಳು, 2-25 ಎಕರೆ ಕೃಷಿ ಜಮೀನು ಸೇರಿ ಒಟ್ಟು ಸ್ಥಿರ ಆಸ್ತಿಯ ಮೌಲ್ಯ 3,22,08,000 ರೂ.

ಅದೇ ರೀತಿ, 1,17,898 ರೂ. ನಗದು, 44,58,200 ರೂ. ಬೆಲೆ ಬಾಳುವ ಚಿನ್ನಾಭರಣಗಳು, 35 ಲಕ್ಷ ರೂ. ಬೆಲೆಬಾಳುವ ವಾಹನಗಳು, 35 ಲಕ್ಷ ರೂ. ಬ್ಯಾಂಕ್ ಎಫ್.ಡಿ ಸೇರಿ ಒಟ್ಟು 1,15,76,098 ರೂ. ಮೌಲ್ಯದ ಚರ ಆಸ್ತಿ ಪತ್ತೆೆ.

► ಮಹೇಶ್, ವ್ಯವಸ್ಥಾಪಕ ನಿರ್ದೇಶಕರು, ಕಾವೇರಿ ನೀರಾವರಿ ನಿಗಮ ನಿಯಮಿತ, ಬೆಂಗಳೂರು. (6.89 ಕೋಟಿ ರೂ.)

7 ಸ್ಥಳಗಳಲ್ಲಿ ಶೋಧನಾ ಕಾರ್ಯ. 25 ನಿವೇಶನಗಳು, 1 ವಾಸದ ಮನೆ, 25 ಎಕರೆ ಕೃಷಿ ಜಮೀನು ಸೇರಿ ಒಟ್ಟು 4,76,33,956 ರೂ. ಮೌಲ್ಯದ ಸ್ಥಿರ ಆಸ್ತಿ.

1,82,284 ರೂ. ನಗದು, 15 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳು, 25 ಲಕ್ಷ ರೂ. ಮೌಲ್ಯದ ವಾಹನಗಳು, 1,71,05,000 ರೂ. ಬೆಲೆಬಾಳುವ ಇತರೆ ವಸ್ತುಗಳು ಸೇರಿ ಒಟ್ಟು 2,12,87,284 ರೂ. ಮೌಲ್ಯದ ಚರ ಆಸ್ತಿ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News