ವಿಧಾನಸಭೆ ಮುಂಗಾರು ಅಧಿವೇಶನ ಪ್ರಾರಂಭ
Update: 2024-07-15 06:04 GMT
ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದೆ.
ಇದಕ್ಕೂ ಮುನ್ನ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಮಹರ್ಷಿ ವಾಲ್ಮೀಕಿ ನಿಗಮದ ಅಕ್ರಮ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರು, ಪರಿಷತ್ ಸದಸ್ಯರು ಶಾಸಕರ ಭವನದ ಬಳಿಯ ವಾಲ್ಮೀಕಿ ಪುತ್ಥಳಿ ಬಳಿ ಸಿಎಂ ರಾಜೀನಾಮೆ ಗೆ ಆಗ್ರಹಿಸಿದರು.
ಪರಿಷತ್ ಕಲಾಪ ಆರಂಭಕ್ಕೂ ಮುನ್ನ ಕಾಂಗ್ರೆಸ್ ಎಂಎಲ್ಸಿಗಳ ಸಭೆ ನಡೆಯಿತು. ವಿಧಾನಸೌಧದ ಪರಿಷತ್ ಮುಖ್ಯ ಸಚೇತಕರ ಕಚೇರಿಯಲ್ಲಿ ಮೀಟಿಂಗ್ ನಡೆಸಲಾಯಿತು. ಕಾಂಗ್ರೆಸ್ ಎಂಎಲ್ಸಿಗಳ ಜತೆ ಸಿಎಂ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದರು. ಸಿಎಂ ಸಭೆಯಲ್ಲಿ ಸಚಿವರಾದ ಹೆಚ್ ಕೆ ಪಾಟೀಲ್, ಪರಮೇಶ್ವರ್ ಸಹಿತ ಪ್ರಮುಖರು ಭಾಗಿಯಾದ್ದರು.